ADVERTISEMENT

ಅಗ್ನಿಶಾಮಕ ಸೇವೆಗಳಲ್ಲಿ ಮಹಿಳೆಯರ ನೇಮಕದ ಕುರಿತು ಚಿಂತನೆ: ಒಡಿಶಾ ಸಿಎಂ ಮಾಝಿ​

ಪಿಟಿಐ
Published 28 ನವೆಂಬರ್ 2024, 3:10 IST
Last Updated 28 ನವೆಂಬರ್ 2024, 3:10 IST
   

ಭುವನೇಶ್ವರ: ಅಗ್ನಿಶಾಮಕ ಸೇವೆಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಹೇಳಿದ್ದಾರೆ. ಇದಕ್ಕಾಗಿ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ಹೊಸದಾಗಿ ನೇಮಕಗೊಂಡ ಅಗ್ನಿಶಾಮಕ ಸಿಬ್ಬಂದಿ ಮತ್ತು ಅಗ್ನಿಶಾಮಕ ಟ್ರಕ್ ಚಾಲಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾಝಿ ಈ ಘೋಷಣೆ ಮಾಡಿದ್ದಾರೆ.

ಅಗ್ನಿಶಾಮಕ ಸೇವೆಗೆ ಮಹಿಳೆಯರನ್ನು ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ‌ಚಿಂತನೆ ನಡೆಸಿದೆ. ಇದಕ್ಕಾಗಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ. ಉದಾಹರಣೆಗೆ 'fireman' ಹುದ್ದೆಗೆ ಬದಲಾಗಿ 'firefighter' or 'Agni' ಎಂದು ತಿದ್ದುಪಡಿ ಮಾಡಬೇಕಿದೆ. ಇದರಿಂದ ಅಗ್ನಿಶಾಮಕ ಸೇವೆಯಲ್ಲಿ ಮಹಿಳೆಯರು ಭಾಗವಹಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಸಮಾರಂಭದಲ್ಲಿ 826 ಅಗ್ನಿಶಾಮಕ ಸಿಬ್ಬಂದಿ ಮತ್ತು 115 ಅಗ್ನಿಶಾಮಕ ಟ್ರಕ್ ಚಾಲಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.