ADVERTISEMENT

ಕೋಟ | ನೆರೆಪೀಡಿತ ಗ್ರಾಮಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆರಳಿದ ಸ್ಪೀಕರ್ ಓಂ ಬಿರ್ಲಾ

ಪಿಟಿಐ
Published 18 ಜುಲೈ 2025, 6:27 IST
Last Updated 18 ಜುಲೈ 2025, 6:27 IST
<div class="paragraphs"><p>ಓಂ ಬಿರ್ಲಾ</p></div>

ಓಂ ಬಿರ್ಲಾ

   

ಕೋಟ: ಭಾರಿ ಮಳೆಯಿಂದಾಗಿ ಜಲಾವೃತವಾದ ರಾಜಸ್ಥಾನದ ಕೋಟ ಜಿಲ್ಲೆಯ ಕುಡಯ್ಲಾ ಗ್ರಾಮಕ್ಕೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಟ್ರ್ಯಾಕ್ಟರ್‌ನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ. 

ಬಿರ್ಲಾ ಅವರು ಕೋಟ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ಬಿರ್ಲಾ ಅವರು ಟ್ರ್ಯಾಕ್ಟರ್‌ನಲ್ಲಿ ಗ್ರಾಮಗಳಲ್ಲಿ ಸಂಚಾರ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ADVERTISEMENT

ಸಂತ್ರಸ್ತ ಜನರಿಗೆ ತ್ವರಿತವಾಗಿ ಪರಿಹಾರವನ್ನು ವಿತರಿಸುವಂತೆಯೂ, ಅಗತ್ಯವಿರುವ ಸಹಾಯವನ್ನು ವಿಸ್ತರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜತೆಗೆ 48 ಗಂಟೆಯೊಳಗೆ ನೆರೆ ಹಾನಿಯ ಬಗ್ಗೆ ವರದಿ ನೀಡುವಂತೆ ಹೇಳಿದ್ದಾರೆ.

ಭಾರಿ ಮಳೆಯಿಂದಾಗಿ ಕೋಟ ಜಿಲ್ಲೆಯ ರಾಮಗಂಜ್ ಮಂಡಿ ನಗರ, ಕುಡಯ್ಲಾ, ಖೈರಾಬಾದ್‌ ಸೇರಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.