ADVERTISEMENT

CBSE Result| ಒಂದು ಪರೀಕ್ಷೆಯಿಂದ ನಿಮ್ಮನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ; ಮೋದಿ

ಪಿಟಿಐ
Published 13 ಮೇ 2025, 9:31 IST
Last Updated 13 ಮೇ 2025, 9:31 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

(ಸಂಗ್ರಹ ಚಿತ್ರ) 

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಪರೀಕ್ಷೆಗಳ ಫಲಿತಾಂಶ ಇಂದು (ಮಂಗಳವಾರ) ಪ್ರಕಟವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಒಂದು ಪರೀಕ್ಷೆಯಿಂದ ಯಾರೊಬ್ಬರನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಸಿಬಿಎಸ್‌ಇ ಪರೀಕ್ಷೆಯಲ್ಲಿ ಉತ್ತೀರ್ಣರಾದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. 'ಇದು ನಿಮ್ಮ ದೃಢನಿಶ್ಚಯ, ಶಿಸ್ತು ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಈ ಸಾಧನೆಗೆ ಕಾರಣರಾದ ಪೋಷಕರ ಪಾತ್ರವನ್ನು ಗುರುತಿಸುವ ದಿನ ಇಂದು' ಎಂದೂ ಹೇಳಿದ್ದಾರೆ.

'ಕೇವಲ ಒಂದು ಪರೀಕ್ಷೆಯಿಂದ ನಿಮ್ಮನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಿಮ್ಮ ಪ್ರಯಾಣವು ಬಹಳಷ್ಟಿದೆ ಮತ್ತು ಸಾಮರ್ಥ್ಯಗಳು ಅಂಕಪಟ್ಟಿಯನ್ನು ಮೀರಿವೆ. ಆತ್ಮವಿಶ್ವಾಸದಿಂದಿರಿ. ಏಕೆಂದರೆ ಮುಂದೆ ಅದ್ಭುತ ವಿಷಯಗಳು ನಿಮಗಾಗಿ ಕಾಯುತ್ತಿರಬಹುದು' ಎಂದು ಪರೀಕ್ಷೆಯಲ್ಲಿ ನಿರಾಶೆಗೊಂಡವರಿಗೆ ‌ಮೋದಿ ಕಿವಿಮಾತು ಹೇಳಿದ್ದಾರೆ.

ಈ ಬಾರಿಯ ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ 88.39ರಷ್ಟಿದೆ. ಕಳೆದ ಸಾಲಿಗಿಂತ ಫಲಿತಾಂಶದಲ್ಲಿ ಈ ಬಾರಿ ಅಲ್ಪ ಹೆಚ್ಚಳವಾಗಿದೆ. ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ 91.64ರಷ್ಟು, ಬಾಲಕರ ಉತ್ತೀರ್ಣ ಪ್ರಮಾಣ ಶೇ 85.70ರಷ್ಟಿದೆ. ‌

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ‌ಶೇ 93.60ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಶೇ 98.90 ರಷ್ಟು ಫಲಿತಾಂಶ ಪಡೆದು ಬೆಂಗಳೂರು ಮೂರನೇ ಸ್ಥಾನ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.