ADVERTISEMENT

ಕಾಣೆಯಾಗಿದ್ದ 48 ಮಕ್ಕಳು, 130 ವಯಸ್ಕರು ಪತ್ತೆ: ‘ಆಪರೇಷನ್ ಮಿಲಾಪ್' ಮರಳಿ ಮನೆಗೆ

ಪಿಟಿಐ
Published 2 ಸೆಪ್ಟೆಂಬರ್ 2025, 9:58 IST
Last Updated 2 ಸೆಪ್ಟೆಂಬರ್ 2025, 9:58 IST
   

ನವದೆಹಲಿ: ದೆಹಲಿಯಲ್ಲಿ ಕಾಣೆಯಾಗಿದ್ದ 48 ಮಕ್ಕಳು ಸೇರಿದಂತೆ 130 ಜನರು ‘ಆಪರೇಷನ್ ಮಿಲಾಪ್' ಕಾರ್ಯಾಚರಣೆಯ ಮೂಲಕ ಮರಳಿ ಕುಟುಂಬವನ್ನು ಸೇರಿದ್ದಾರೆ.

‘ಆಪರೇಷನ್ ಮಿಲಾಪ್' ಕಾರ್ಯಾಚರಣೆಯಲ್ಲಿ ಆ.1 ರಿಂದ 31ರ ವರೆಗೆ ಕಾಣೆಯಾದ ಅಥವಾ ಅಪಹರಿಸಲಾಗಿದೆ ಎನ್ನಲಾದ 48 ಮಕ್ಕಳು ಹಾಗೂ 82 ವಯಸ್ಕರನ್ನು ಮರಳಿ ಕುಟುಂಬಕ್ಕೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಜನವರಿಯಿಂದ ಈ ವರೆಗೆ 931 ಜನರನ್ನು ಕಾಣೆಯಾಗಿದ್ದರು. ಅದರಲ್ಲಿ 306 ಮಕ್ಕಳು ಹಾಗೂ 625 ವಯಸ್ಕರಿದ್ದು ಅವರವರ ಕುಟುಂಬಗಳಿಗೆ ಸೇರಿಸಲಾಗಿದೆ ಎಂದು ನೈಋತ್ಯ ಪೊಲೀಸ್ ಉಪ ಆಯುಕ್ತ ಅಮಿತ್ ಗೋಯೆಲ್ ಹೇಳಿದ್ದಾರೆ.

ADVERTISEMENT

ಕಾಣೆಯಾದವರನ್ನು ಪತ್ತೆ ಮಾಡಲು ಗುಪ್ತಚರ ಮಾಹಿತಿಯನ್ನು ಆಧರಿಸಿ ‘ಆಪರೇಷನ್ ಮಿಲಾಪ್' ನಡೆಸಲಾಯಿತು. ಕಾರ್ಯಾಚರಣೆಗೆ ನಗರದ ಸಿಸಿಟಿವಿಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಆಟೋ ನಿಲ್ದಾಣ, ಸ್ಥಳೀಯ ಮಾಹಿತಿದಾರರು, ಸಾರಿಗೆ ಸಿಬ್ಬಂದಿ ಹಾಗೂ ವಸ್ತುಗಳ ಮಾರಾಟಗಾರರಿಂದ ಸುಳಿವುಗಳು ದೊರೆತವು ಎಂದು ಪೊಲೀಸರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.