ADVERTISEMENT

Operation Sindhu: ಇರಾನ್‌ನಿಂದ ಈವರೆಗೆ 3,426 ಭಾರತೀಯರು ವಾಪಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2025, 6:02 IST
Last Updated 26 ಜೂನ್ 2025, 6:02 IST
<div class="paragraphs"><p>ಭಾರತೀಯರ ವಾಪಸ್&nbsp;</p></div>

ಭಾರತೀಯರ ವಾಪಸ್ 

   

ಚಿತ್ರ ಕೃಪೆ: X/@MEAIndia

ನವದೆಹಲಿ: 'ಆಪರೇಷನ್ ಸಿಂಧೂ' ಕಾರ್ಯಾಚರಣೆ ಮೂಲಕ ಇರಾನ್‌ನಿಂದ ಈವರೆಗೂ 3,426 ಭಾರತೀಯರನ್ನು ಕರೆತರಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.

'ಬುಧವಾರ ಮಧ್ಯರಾತ್ರಿ 12ಕ್ಕೆ ವಿಶೇಷ ವಿಮಾನವು ಮಶ್‌ಹದ್‌ನಿಂದ ನವದೆಹಲಿಗೆ ಬಂದಿಳಿಯಿತು. ಈ ವಿಮಾನದಲ್ಲಿ 271 ಭಾರತೀಯ ಪ್ರಜೆಗಳು ಇರಾನ್‌ನಿಂದ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

'ಇದರೊಂದಿಗೆ ಈವರೆಗೆ 3,426 ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಕರೆತರಲಾಗಿದೆ' ಎಂದು ಹೇಳಿದ್ದಾರೆ.

ನೇಪಾಳದ ಮೂವರು ವಾಪಸ್...

ಈ ವಿಶೇಷ ವಿಮಾನದಲ್ಲಿ ಸಂಘರ್ಷಪೀಡಿತ ಇರಾನ್‌ನಿಂದ ನೇಪಾಳದ ಮೂವರು ಪ್ರಜೆಗಳನ್ನು ಕರೆತರಲಾಗಿದೆ ಎಂದು ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.