ADVERTISEMENT

ಬಿಜೆಪಿ ನಾಯಕರು ಐಎಂಎಫ್ ವಿರುದ್ಧವೂ ವಾಗ್ದಾಳಿ ನಡೆಸೋ ಸಾಧ್ಯತೆ ಇದೆ: ಚಿದಂಬರಂ

ಏಜೆನ್ಸೀಸ್
Published 21 ಜನವರಿ 2020, 11:32 IST
Last Updated 21 ಜನವರಿ 2020, 11:32 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ:ಬಿಜೆಪಿ ನಾಯಕರುಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮತ್ತು ಅದರ ಮುಖ್ಯ ಆರ್ಥಿಕ ತಜ್ಞೆ ವಿರುದ್ಧವೂ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ವ್ಯಂಗ್ಯವಾಡಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ (2019–20) ಭಾರತದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 4.8ರಷ್ಟಿರಲಿದೆ ಎಂದು ಐಎಂಎಫ್‌ ಸೋಮವಾರ ಅಂದಾಜಿಸಿತ್ತು (ಜಿಡಿಪಿ ದರ ಶೇ 6.1ರಷ್ಟು ಬೆಳವಣಿಗೆ ಕಾಣಲಿದೆ ಎಂದು 2019ರ ಅಕ್ಟೋಬರ್‌ನಲ್ಲಿ ಐಎಂಎಫ್ ಅಂದಾಜಿಸಿತ್ತು).ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಗೆ ಮುನ್ನ ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ ಮುನ್ನೋಟದಲ್ಲಿ ಐಎಂಎಫ್‌ ಈ ಮಾಹಿತಿ ನೀಡಿತ್ತು.

ಈ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಚಿದಂಬರಂ, ‘ಕೆಲವು ಲೆಕ್ಕಾಚಾರಗಳ ಬಳಿಕ ಶೇ 4.8 ಎನ್ನಲಾಗಿದೆಯಷ್ಟೇ. ಅದು ಇನ್ನೂ ಕುಸಿತವಾದರೆ ಅಚ್ಚರಿಯಿಲ್ಲ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘ನೋಟು ರದ್ದತಿಯನ್ನು ಬಹಿರಂಗವಾಗಿ ತಪ್ಪು ನಿರ್ಧಾರ ಎಂದವರಲ್ಲಿ ಐಎಂಎಫ್‌ನ ಮುಖ್ಯ ಆರ್ಥಿಕತಜ್ಞೆ ಗೀತಾ ಗೋಪಿನಾಥ್ ಮೊದಲಿಗರು. ಐಎಂಎಫ್ ಮತ್ತು ಅದರಮುಖ್ಯ ಆರ್ಥಿಕತಜ್ಞೆ ಗೀತಾ ಗೋಪಿನಾಥ್ ಮೇಲೆಯೂ ಕೇಂದ್ರದ ಸಚಿವರು ವಾಗ್ದಾಳಿ ನಡೆಸಬಹುದು. ನಾವದಕ್ಕೆ ಸಿದ್ಧರಾಗಿರಬೇಕು’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.