ADVERTISEMENT

ಚೆನಾಬ್ ನದಿ ನೀರು ಸ್ಥಗಿತ: ಪಾಕ್‌ಗೆ ಮತ್ತೊಂದು ಪೆಟ್ಟು ಕೊಟ್ಟ ಭಾರತ; ವರದಿ

​ಪ್ರಜಾವಾಣಿ ವಾರ್ತೆ
Published 4 ಮೇ 2025, 9:47 IST
Last Updated 4 ಮೇ 2025, 9:47 IST
<div class="paragraphs"><p>ನದಿ ನೀರು </p></div>

ನದಿ ನೀರು

   

ನವದೆಹಲಿ: ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಿದ ಬೆನ್ನಲ್ಲೇ ಇದೀಗ ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟೆಯಿಂದ ಪಾಕ್​ಗೆ ಹರಿಯುತ್ತಿದ್ದ ನೀರನ್ನು ಭಾರತ ಬಂದ್ ಮಾಡಿದೆ.

ಇದರ ಜೊತೆಗೆ, ಜೇಲಂ ನದಿಯ ಕಿಶನ್​ಗಂಗಾ ಡ್ಯಾಂನಿಂದಲೂ ಹೊರ ಹರಿವನ್ನು ಬಂದ್ ಮಾಡಲು ನಿರ್ಧರಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ADVERTISEMENT

ಜಮ್ಮುವಿನ ರಾಂಬನ್​ನಲ್ಲಿರುವ ಬಾಗ್ಲಿಹಾರ್​ ಮತ್ತು ಉತ್ತರ ಕಾಶ್ಮೀರದ ಕಿಶನ್​ಗಂಗಾದಲ್ಲಿರುವ ಅಣೆಕಟ್ಟುಗಳಿಂದ ಪಾಕ್​ಗೆ ನೀರು ಹರಿಸುವುದನ್ನು ಭಾರತ ತಡೆದಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ಸಿಂಧೂ ನದಿ ಮತ್ತು ಅದರ ಉಪನದಿಗಳ ಬಳಕೆ ಕುರಿತು 1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಿಂಧೂ ಜಲ ಒಪ್ಪಂದವಾಗಿತ್ತು. 

ಏಪ್ರಿಲ್ 22ರಂದು ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ಮಾಡಿ 26 ಜನರನ್ನು ಹತ್ಯೆಗೈದ ಬಳಿಕ ಭಾರತ, ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾಗಿದೆ.

ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿದ್ದು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ.

ಇದರ ಭಾಗವಾಗಿ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಿದ್ದಲ್ಲದೇ, ಭಾರತದಲ್ಲಿದ್ದ ಪಾಕ್ ಪ್ರಜೆಗಳ ವೀಸಾ ರದ್ದು ಮಾಡಿ ಅವರನ್ನು ವಾಪಸ್ ಕಳುಹಿಸಿದೆ. ಪಾಕಿಸ್ತಾನದಿಂದ ಯಾವುದೇ ವಸ್ತುಗಳು ಆಮದಾಗದಂತೆ ವ್ಯಾಪಾರ ವಹಿವಾಟಿನ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪಾಕ್​ನ ಎಲ್ಲಾ ರೀತಿಯ ಮೇಲ್​ ಮತ್ತು ಪಾರ್ಸೆಲ್​ಗಳನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.