ADVERTISEMENT

ಕರಾಚಿ: ಉಗ್ರರಿಂದ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ದಾಳಿ–ನಾಲ್ವರ ಸಾವು

ಪಿಟಿಐ
Published 18 ಫೆಬ್ರುವರಿ 2023, 7:01 IST
Last Updated 18 ಫೆಬ್ರುವರಿ 2023, 7:01 IST
.
.   

ಕರಾಚಿ (ಪಿಟಿಐ): ಪಾಕಿಸ್ತಾನದಲ್ಲಿನ ತಾಲಿಬಾನ್‌ ಉಗ್ರ ಸಂಘಟನೆಗೆ ಸೇರಿದ ಎಂಟು ಮಂದಿ ಶಸ್ತ್ರಸಜ್ಜಿತ ಉಗ್ರರು ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿ ಮೇಲೆ ಶುಕ್ರವಾರ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಬಂಡುಕೋರರು ಸೇರಿದಂತೆ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ.

‘ಸ್ಥಳೀಯ ಕಾಲಮಾನ ಸಂಜೆ 7.10ರ ಸುಮಾರಿಗೆ ಉಗ್ರರು ಕಚೇರಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಸಿಬ್ಬಂದಿಯೂ ಪ್ರತಿದಾಳಿ ನಡೆಸಿದ್ದಾರೆ’ ಎಂದು ಕರಾಚಿ ಪೊಲೀಸ್‌ ಮುಖ್ಯಸ್ಥ ಜಾವೇದ್‌ ಒದೊ ಟ್ವೀಟ್‌ ಮಾಡಿದ್ದಾರೆ.

‘ದಾಳಿಯಲ್ಲಿ ಇಬ್ಬರು ಬಂಡುಕೋರರು, ಪೊಲೀಸ್‌ ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಅಸುನೀಗಿದ್ದಾರೆ. ನಾಲ್ವರು ಪೊಲೀಸರು ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡಿದ್ದಾರೆ. ಪೊಲೀಸ್‌ ಸಮವಸ್ತ್ರ ಧರಿಸಿದ್ದ ಇಬ್ಬರು ಉಗ್ರರು ಮುಖ್ಯದ್ವಾರದ ಮೂಲಕ ಕಚೇರಿ ಪ್ರವೇಶಿಸಿದರೆ ಉಳಿದವರು ಕಟ್ಟಡದ ಹಿಂಬದಿಯಿಂದ ಕಚೇರಿಯ ಆವರಣ ಪ್ರವೇಶಿಸಿದ್ದರು’ ಎಂದು ದಕ್ಷಿಣ ವಿಭಾಗದ ಡಿಐಜಿ ಇರ್ಫಾನ್‌ ಬಲೋಚಾ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.