ADVERTISEMENT

ದೆಹಲಿ ಚಲೋ | ರೈತರೊಂದಿಗೆ ಕೈಜೋಡಿಸುವಂತೆ SKMಗೆ ಪತ್ರ ಬರೆದ ಸರವಣ ಸಿಂಗ್ ಪಂಢೇರ್

ಪಿಟಿಐ
Published 15 ಡಿಸೆಂಬರ್ 2024, 13:01 IST
Last Updated 15 ಡಿಸೆಂಬರ್ 2024, 13:01 IST
<div class="paragraphs"><p>ಸರವಣ ಸಿಂಗ್ ಪಂಢೇರ್</p></div>

ಸರವಣ ಸಿಂಗ್ ಪಂಢೇರ್

   

ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ)ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೈಜೋಡಿಸುವಂತೆ ಪಂಜಾಬ್‌ನ ರೈತ ನಾಯಕ ಸರವಣ ಸಿಂಗ್ ಪಂಢೇರ್ ಅವರು ಸಂಯುಕ್ತ ಕಿಸಾನ್ ಮೋರ್ಚಾಗೆ (ಎಸ್‌ಕೆಎಂ) ಭಾನುವಾರ ಪತ್ರ ಬರೆದಿದ್ದಾರೆ.

ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರ ಜಂಟಿ ಹೋರಾಟಕ್ಕೆ ಎಸ್‌ಕೆಎಂ ನಾಯಕ ರಾಕೇಶ್ ಟಿಕಾಯತ್ ಕರೆ ನೀಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ADVERTISEMENT

ದೆಹಲಿ ಚಲೋಗೆ ಭದ್ರತಾ ಸಿಬ್ಬಂದಿ ತಡೆಯೊಡ್ಡಿರುವುದರಿಂದ ಕಳೆದ ಫೆ. 13ರಿಂದಲೂ ರೈತರು, ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಕಿಸಾನ್ ಮಜ್ದೂರ್‌ ಮೋರ್ಚಾ (ಕೆಎಂಎಂ) ಬ್ಯಾನರ್‌ನಡಿ ಶಂಭು ಹಾಗೂ ಖನೌರಿ ಗಡಿಯಲ್ಲಿ ಬೀಡುಬಿಟ್ಟಿದ್ದಾರೆ.

ಡಿಸೆಂಬರ್ 6 ಮತ್ತು 8ರಂದು 101 ರೈತರ ಗುಂಪು ಕಾಲ್ನಡಿಗೆಯಲ್ಲಿ ದೆಹಲಿ ಪ್ರವೇಶಿಸಲು 2 ಬಾರಿ ಪ್ರಯತ್ನಿಸಿವೆ. ಆದರೆ ಹರಿಯಾಣದಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ.

ಇನ್ನು ಕೃಷಿ ಕಾನೂನುಗಳ ವಿರುದ್ಧ 2020ರಲ್ಲಿ ನಡೆದ ರೈತರ ಚಳವಳಿಯನ್ನು ಮುನ್ನಡೆಸಿದ್ದ ಎಸ್‌ಕೆಎಂ 'ದೆಹಲಿ ಚಲೋ' ಪಾದಯಾತ್ರೆಯಲ್ಲಿ ಭಾಗಿಯಾಗಿರಲಿಲ್ಲ.

ಶಂಭು ಗಡಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪಂಢೇರ್, ದೆಹಲಿ ಚಲೋ ಮೆರವಣಿಗೆಯಲ್ಲಿ ಭಾಗವಹಿಸುವಂತೆ ನಾವು ನಮ್ಮ ಸಹೋದರರಿಗೆ (SKM) ಪತ್ರ ಬರೆದಿದ್ದೇವೆ. ಅವರಿಂದ ಸಕಾರಾತ್ಮಕ ಉತ್ತರವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.