ADVERTISEMENT

ಬಿಜೆಪಿಯ ಒಡೆದಾಳುವ ತಂತ್ರ ಯಶಸ್ಸು ಕಾಣುವುದಿಲ್ಲ: ಮಧ್ಯಪ್ರದೇಶ ಕಾಂಗ್ರೆಸ್ ಘಟಕ

ಏಜೆನ್ಸೀಸ್
Published 11 ಮಾರ್ಚ್ 2020, 6:26 IST
Last Updated 11 ಮಾರ್ಚ್ 2020, 6:26 IST
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್   

ಭೋಪಾಲ್‌: ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ನೊಂದಿಗಿನ ದೀರ್ಘಕಾಲದ ನಂಟು ಕಳಚಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, 22 ಶಾಸಕರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿಯನ್ನು ದೂರಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಘಟಕವು, ಬಿಜೆಪಿಯ ಒಡೆದು ಆಳುವ ನೀತಿಯು ಯಶಸ್ಸು ಕಾಣುವುದಿಲ್ಲ. ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ ಎಂದು ಹೇಳಿದೆ.

ಒಟ್ಟಾರೆ ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ನಾಯಕತ್ವದ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಒಗ್ಗಟ್ಟು ಮತ್ತು ಭದ್ರವಾಗಿದೆ. ಬಿಜೆಪಿಯ ಒಡೆದು ಆಳುವ ನೀತಿಯು ಎಂದಿಗೂ ಯಶಸ್ಸು ಕಾಣುವುದಿಲ್ಲ. ನಮ್ಮ ಎಲ್ಲ ಶಾಸಕರು ಕೂಡ ರಾಜ್ಯದ ಜನರ ಬಗ್ಗೆಹೊಣೆಗಾರಿಗೆ, ಕರ್ತವ್ಯ ಮತ್ತು ನೈತಿಕತೆಗೆ ಬದ್ಧರಾಗಿದ್ದಾರೆಎಂದು ಟ್ವೀಟ್ ಮಾಡಿದೆ.

ADVERTISEMENT

ಹೋಟೆಲ್‌ನಲ್ಲಿ ತಂಗಿದ್ದ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆಲವು ರೆಬೆಲ್ ಶಾಸಕರನ್ನು ಸಮಾಧಾನ ಪಡಿಸಿ ಕರೆತರುವಂತೆ ಮುಖಂಡರಾದ ಸಜ್ಜನ್‌ ಸಿಂಗ್‌ ವರ್ಮಾ ಮತ್ತು ಗೋವಿಂದ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಮಂಗಳವಾರ ಬೆಂಗಳೂರಿಗೆ ಕಳುಹಿಸಿತ್ತು.

ಬಹುತೇಕ ರೆಬಲ್ ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಆಪ್ತರು ಮತ್ತು ಪಕ್ಷದೊಳಗೆ ಸಿಂಧಿಯಾ ಅವರನ್ನು ಕಡೆಗಣಿಸಿದ್ದಕ್ಕೆ ಬೇಸರಗೊಂಡಿದ್ದರು. 2018ರಲ್ಲಿ ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಯಾದಾಗಿನಿಂದಲೂ ಒಳಗೊಳಗೆ ಭಿನ್ನಾಭಿಪ್ರಾಯ ತಲೆದೋರಲು ಕಾಂಗ್ರೆಸ್ ಸಾಕ್ಷಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.