ADVERTISEMENT

ಪೈಲಟ್‌ಗಳದ್ದೇ ತಪ್ಪು ಎನ್ನುವ ರೀತಿ ತನಿಖೆ ಮಾಡಲಾಗುತ್ತಿದೆ: ಎಎಲ್‌ಪಿಎ ಆಕ್ರೋಶ

ರಾಯಿಟರ್ಸ್
ಪಿಟಿಐ
Published 14 ಜುಲೈ 2025, 14:40 IST
Last Updated 14 ಜುಲೈ 2025, 14:40 IST
<div class="paragraphs"><p>ಪಿಟಿಐ ಚಿತ್ರ</p></div>
   

ಪಿಟಿಐ ಚಿತ್ರ

ನವದೆಹಲಿ: ‘ಪೈಲಟ್‌ಗಳದ್ದೇ ತಪ್ಪು ಎನ್ನುವ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಭಾರತೀಯ ಏರ್‌ಲೈನ್ಸ್‌ ಪೈಟಲ್‌ಗಳ ಸಂಘ (ಎಎಲ್‌ಪಿಎ ಇಂಡಿಯಾ) ಹೇಳಿದೆ.

ಮಾನವ ದೋಷದ ಕಾರಣದಿಂದಲೇ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ವಿಮಾನವು ಪತನಗೊಂಡಿದೆ ಎಂಬ ಆರೋಪವನ್ನು ಸಂಘ ತಳ್ಳಿಹಾಕಿದೆ.

ADVERTISEMENT

ಇಂಧನ ಪೂರೈಕೆ ಮಾಡುವ ‘ಇಂಧನ ಸ್ವಿಚ್‌’ ಅನ್ನು ಆಫ್‌ ಮಾಡಿದ್ದರಿಂದ ವಿಮಾನ ಪತನಗೊಂಡಿತು ಎಂದು ವಿಮಾನ ಅಪಘಾತ ತನಿಖಾ ಬ್ಯುರೊದ ಪ್ರಾಥಮಿಕ ವರದಿಯು ಬಹಿರಂಗಗೊಂಡ ಬಳಿಕ ಮೃತ ಪೈಟಲ್‌ಗಳನ್ನು ಗುರಿಯಾಗಿಸಲಾಗುತ್ತಿದೆ.

‘ತನಿಖಾ ಸಂಸ್ಥೆಯು ತನಿಖೆಯ ಕುರಿತು ‘ರಹಸ್ಯ’ ಮಾಡುತ್ತಿದೆ. ತನಿಖೆಯಲ್ಲಿ ಸೂಕ್ತವಾದ ತಜ್ಞ ವ್ಯಕ್ತಿಗಳು ಭಾಗಿಯಾಗಿಲ್ಲ. ಪಾರದರ್ಶಕತೆ ತರುವ ದೃಷ್ಟಿಯಿಂದ ತನಿಖೆಯಲ್ಲಿ ವೀಕ್ಷಕರನ್ನು ಭಾಗಿ ಮಾಡಿಕೊಳ್ಳಬೇಕು’ ಎಂದು ವಿಮಾನ ಅಪಘಾತ ತನಿಖಾ ಬ್ಯುರೊಗೆ (ಎಎಐಬಿ) ಸಂಘ ಮನವಿ ಮಾಡಿದೆ.

‘ಪೈಲಟ್‌ಗಳೇ ವಿಮಾನ ಪತನಗೊಳ್ಳುವಂತೆ ಮಾಡಿದ್ದಾರೆ (ಪೈಲಟ್‌ ಸೂಸೈಡ್‌) ಎಂಬಂಥ ವಾದವನ್ನು ಮುಂದಿಡಲಾಗುತ್ತದೆ. ಇಂಥ ಕಲ್ಪಿತ ವಾದಸರಣಿಯಿಂದ ತೀವ್ರ ನೋವಾಗಿದೆ. ಈ ಹಂತದಲ್ಲಿ ಇಂಥ ಅಭಿಪ್ರಾಯಗಳನ್ನು ನೀಡುವುದಕ್ಕೆ ಯಾವುದೇ ಆಧಾರ ಇಲ್ಲ. ಇದು ಪೈಲಟ್‌ಗಳ ವೃತ್ತಿ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತವೆ’ ಎಂದು ಭಾರತೀಯ ವಾಣಿಜ್ಯ ಪೈಟಲ್‌ಗಳ ಸಂಘ (ಐಸಿಪಿಎ) ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.