ಚುನಾವಣಾ ಆಯೋಗ
–ಪಿಟಿಐ ಚಿತ್ರ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರ ಅವಧಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಹೀಗಾಗಿ, ರಾಜೀವ್ ಕುಮಾರ್ ಅವರ ಉತ್ತರಾಧಿಕಾರಿ ಆಯ್ಕೆ ಸಂಬಂಧ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಸೋಮವಾರ (ಫೆಬ್ರುವರಿ 17ರಂದು) ಸಭೆ ನಡೆಸಲಿದೆ.
ಈ ಸಮಿತಿಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೂ ಒಳಗೊಂಡಿರುತ್ತದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ನೇತೃತ್ವದ ಶೋಧನಾ ಸಮಿತಿ ಪ್ರಸ್ತಾಪಿಸಿದ ಐವರ ಪೈಕಿ ಒಬ್ಬರನ್ನು ಆಯ್ಕೆ ಸಮಿತಿಯುು ಶಿಫಾರಸು ಮಾಡಲಿದೆ. ಆಯ್ಕೆ ಸಮಿತಿಯು, ಶೋಧನಾ ಸಮಿತಿ ಸೂಚಿಸಿರುವ ಹೆಸರುಗಳನ್ನು ಹೊರತುಪಡಿಸಿ, ಬೇರೆಯವರನ್ನೂ ಪರಿಗಣಿಸಬಹುದಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತು ಮತ್ತು ಅಧಿಕಾರಾವಧಿ) ಕಾಯ್ದೆ 2023ರ ಪ್ರಕಾರ, ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯವರಿಂದ ನಾಮನಿರ್ದೇಶನಗೊಂಡ ಕೇಂದ್ರ ಸಚಿವರು ಆಯ್ಕೆ ಸಮಿತಿಯ ಸದಸ್ಯರಾಗಿರಲಿದ್ದಾರೆ.
ಆಯ್ಕೆ ಸಮಿತಿ ಮಾಡುವ ಶಿಫಾರಸ್ಸಿನ ಆಧಾರದಲ್ಲಿ ರಾಷ್ಟ್ರಪತಿ ಅವರು ಸಿಇಸಿ ನೇಮಕ ಮಾಡಲಿದ್ದಾರೆ.
ರಾಜೀವ್ ಕುಮಾರ್ (62) ಅವರು ಕೇರಳ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ. ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಅವರು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿಇಸಿ ಆಗಿ ಅವರ ಅಧಿಕಾರ ಅವಧಿಯು ಫೆಬ್ರುವರಿ 18ರಂದು ಕೊನೆಗೊಳ್ಳಲಿದೆ.
ರಾಜೀವ್ ಕುಮಾರ್ ನಂತರ, ಜ್ಞಾನೇಶ್ ಕುಮಾರ್ ಅವರು ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದಾರೆ. ಅವರ ಅಧಿಕಾರಾವಧಿಯು ಜನವರಿ 26, 2029 ರವರೆಗೆ ಇದೆ. ಸುಖಬೀರ್ ಸಿಂಗ್ ಸಂಧು ಅವರು ಆಯೋದಲ್ಲಿರುವ ಮತ್ತೊಬ್ಬ ಚುನಾವಣಾ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.