ಚೀನಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಟಿಯಾಜಿನ್: ಏಳು ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೀನಾಗೆ ಬಂದಿಳಿದಿದ್ದಾರೆ.
ಭಾರತದ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ಹೇರಿದ ಬೆನ್ನಲ್ಲೇ ಮೋದಿ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಜಪಾನ್‌ನಿಂದ ಅವರು ಚೀನಾಗೆ ಭೇಟಿ ನೀಡಿದ್ದಾರೆ.
ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ರಂದು ಶಾಂಘೈ ಸಹಕಾರ ಸಂಘದ ವಾರ್ಷಿಕ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಜೊತೆ ಭಾನುವಾರ ಸಭೆ ನಿಗದಿಯಾಗಿದ್ದು, ಅಮೆರಿಕ ಸುಂಕ ಹೇರಿಕೆ ದೃಷ್ಟಿಯಿಂದ ಈ ಮಾತುಕತೆ ಮಹತ್ವದ್ದು ಎನಿಸಿದೆ.
ಭಾರತ– ಚೀನಾ ಆರ್ಥಿಕತೆ, ಪೂರ್ವ ಲಡಾಖ್ ವಿವಾದ ಬಳಿಕ ಹಳಸಿರುವ ಸಂಬಂಧ ಸುಧಾರಣೆ ಬಗ್ಗೆ ಮಾತುಕತೆ ನಡೆಯಲಿದೆ.
ಸಮಾವೇಶದ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ ಹಲವು ನಾಯಕರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.