ನವದೆಹಲಿ: ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಶೀರ್ಷಿಕೆಯೊಂದಿಗೆ ಖಾಲಿ ಪುಟವನ್ನು ನಮಗೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಬುಧವಾರ ಹೇಳಿದ್ದಾರೆ.
ಪ್ರಧಾನಿಯವರು ಖಾಲಿ ಬಿಟ್ಟ ಪುಟವನ್ನು ಇಂದು ಹಣಕಾಸು ಸಚಿವರು ಭರ್ತಿ ಮಾಡುವುದನ್ನು ನಾವು ಎದುರುನೋಡುತ್ತಿದ್ದೇವೆ. ಸರ್ಕಾರವು ಆರ್ಥಿಕತೆಗೆ ಹೆಚ್ಚುವರಿಯಾಗಿ ನೀಡುವ ಪ್ರತಿಯೊಂದು ರೂಪಾಯಿಯನ್ನೂ ನಾವು ಎಚ್ಚರಿಕೆಯಿಂದ ಎಣಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಯಾರಿಗೆ ಏನು ಸಿಗುತ್ತದೆ ಎಂಬುದನ್ನೂ ನಾವು ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ. ಬಡವರು, ಹಸಿವಿನಿಂದ ಕಂಗೆಟ್ಟಿರುವವರು ಮತ್ತು ಕೆಲಸದ ಸ್ಥಳಗಳಿಂದ ಬೇರ್ಪಟ್ಟು ನೂರಾರು ಕಿಲೋ ಮೀಟರ್ ದೂರ ನಡೆದು ತವರು ರಾಜ್ಯಗಳಿಗೆ ತೆರಳಿರುವ ವಲಸೆ ಕಾರ್ಮಿಕರಿಗೆ ಏನು ಸಿಗಬಹುದು ಎಂಬುದನ್ನು ಮೊದಲು ಗಮನಿಸುತ್ತೇವೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.