ADVERTISEMENT

ಕಾಶಿ ವಿಶ್ವನಾಥ ಧಾಮದ ಕೆಲಸಗಾರರಿಗಾಗಿ ಸೆಣಬಿನ ಪಾದರಕ್ಷೆ ಕಳುಹಿಸಿದ ಪ್ರಧಾನಿ

ಪಿಟಿಐ
Published 10 ಜನವರಿ 2022, 8:20 IST
Last Updated 10 ಜನವರಿ 2022, 8:20 IST
ಕಾಶಿ ವಿಶ್ವನಾಥ ಧಾಮ ಯೋಜನೆಯ ಮೊದಲ ಹಂತದ ಕಾಮಗಾರಿಗಳ ಉದ್ಘಾಟನಾ ಸಮಾರಂಭದ  ಪ್ರಧಾನಿ ನರೇಂದ್ರ ಮೋದಿ -ಪಿಟಿಐ ಚಿತ್ರ
ಕಾಶಿ ವಿಶ್ವನಾಥ ಧಾಮ ಯೋಜನೆಯ ಮೊದಲ ಹಂತದ ಕಾಮಗಾರಿಗಳ ಉದ್ಘಾಟನಾ ಸಮಾರಂಭದ  ಪ್ರಧಾನಿ ನರೇಂದ್ರ ಮೋದಿ -ಪಿಟಿಐ ಚಿತ್ರ   

ನವದೆಹಲಿ: ಕಾಶಿ ವಿಶ್ವನಾಥ ಧಾಮದ ಆವರಣದಲ್ಲಿ ಲೆದರ್‌ ಅಥವಾ ರಬ್ಬರ್‌ ಚಪ್ಪಲಿಗಳನ್ನು ಧರಿಸುವುದನ್ನು ನಿಷೇಧಿಸಿರುವುದರಿಂದ, ಬರಿಗಾಲಿನಲ್ಲೇ ಕೆಲಸ ಮಾಡುವ ಸಿಬ್ಬಂದಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 100 ಜೊತೆ ಸೆಣಬಿನ ಪಾದರಕ್ಷೆಗಳನ್ನು ಕಳುಹಿಸಿಕೊಟ್ಟಿದ್ದಾರೆ.

ಅರ್ಚಕರು, ರಕ್ಷಣಾ ಸಿಬ್ಬಂದಿ, ಸ್ವಚ್ಛತಾ ಕಾರ್ಯಕರ್ತರು ಮತ್ತು ಇತರರಿಗಾಗಿ ಇವುಗಳನ್ನು ಕಳುಹಿಸಲಾಗಿದೆ ಎಂದುಸರ್ಕಾರದ ಮೂಲಗಳು ಸೋಮವಾರ ತಿಳಿಸಿವೆ.

ಕೊರೆಯುವ ಚಳಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಸಿಬ್ಬಂದಿಯು ಬರಿಗಾಲಿನಲ್ಲಿ ಇರಬೇಕಾಗಿಲ್ಲ ಎಂದು ಮೋದಿ ಅವರು ಸೆಣಬಿನ ಪಾದರಕ್ಷೆಗಳನ್ನು ಖರೀದಿಸಿ ಧಾಮಕ್ಕೆ ಕಳುಹಿಸಿಕೊಟ್ಟಿದ್ದಾರೆ.

ADVERTISEMENT

'ಪ್ರಧಾನಿ ಮೋದಿ ಅವರು ಕಾಶಿ ವಿಶ್ವನಾಥ ಧಾಮದೊಂದಿಗೆ ಆಳವಾಗಿ ತೊಡಗಿಸಿಕೊಂಡಿದ್ದಾರೆ. ವಾರಣಾಸಿಯ ಆಗು-ಹೋಗುಗಳು ಮತ್ತು ಅಭಿವೃದ್ಧಿ ವಿಚಾರದಲ್ಲಿನಿಗಾ ಇರಿಸಿದ್ದಾರೆ. ಅವರು, ಸೂಕ್ಷ್ಮ ವಿಚಾರಗಳತ್ತ ಗಮನಹರಿಸುವುದಕ್ಕೆ ಮತ್ತುಬಡವರ ಬಗ್ಗೆ ಹೊಂದಿರುವ ಕಾಳಜಿಗೆ ಇದು ಮತ್ತೊಂದು ಉದಾಹರಣೆಯಾಗಿದೆ' ಎಂದು ಮೂಲಗಳು ತಿಳಿಸಿವೆ.

ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯ ವ್ಯಾಪ್ತಿಯಲ್ಲಿರುವ ಕಾಶಿ ವಿಶ್ವನಾಥ ಧಾಮ ಯೋಜನೆಯ (ಕಾರಿಡಾರ್‌) ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉದ್ಘಾಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.