ADVERTISEMENT

International Yoga Day: ಆಂಧ್ರಪ್ರದೇಶದಲ್ಲಿ 3 ಲಕ್ಷ ಜನರೊಂದಿಗೆ ಮೋದಿ ಭಾಗಿ

ಪಿಟಿಐ
Published 20 ಜೂನ್ 2025, 5:01 IST
Last Updated 20 ಜೂನ್ 2025, 5:01 IST
<div class="paragraphs"><p>ನರೇಂದ್ರ ಮೋದಿ  (ಸಂಗ್ರಹ ಚಿತ್ರ)</p></div>

ನರೇಂದ್ರ ಮೋದಿ (ಸಂಗ್ರಹ ಚಿತ್ರ)

   

ಅಮರಾವತಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಂಧ್ರ ಪ್ರದೇಶದಲ್ಲಿ ಶನಿವಾರ (ಜೂನ್‌ 21ರಂದು) ಆಯೋಜನೆಗೊಳ್ಳಲಿರುವ ಬೃಹತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.

ಬಂದರು ನಗರಿ ವಿಶಾಖಪಟ್ಟಣದ ಆರ್‌ಕೆ ಬೀಚ್‌ನಿಂದ ಭೋಗಪುರಂ ವರೆಗೆ 26 ಕಿ.ಮೀ. ಉದ್ದದ ಕಾರಿಡಾರ್‌ನಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ.

ADVERTISEMENT

ಇಲ್ಲಿ ಮಾಡಿಕೊಂಡಿರುವ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಎ. ಚಂದ್ರಬಾಬು ನಾಯ್ಡು, ಆರ್‌ಕೆ ಬೀಚ್‌ನಿಂದ ಭೋಗಪುರಂ ವರೆಗೆ 26 ಕಿ.ಮೀ ವ್ಯಾಪ್ತಿಯ ವಿಸ್ತಾರವಾದ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸುಮಾರು 3.19 ಲಕ್ಷ ಜನರು ಏಕಕಾಲದಲ್ಲಿ ಯೋಗ ಮಾಡಬಹುದು ಎಂದಿದ್ದಾರೆ.

ಬೆಳಿಗ್ಗೆ 6.30ರಿಂದ 8ರ ವರೆಗೆ ನಿಗದಿಯಾಗಿರುವ ಈ ಕಾರ್ಯಕ್ರಮವನ್ನು ಗಿನ್ನೆಸ್‌ ವಿಶ್ವ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸುವ ರೀತಿಯಲ್ಲಿ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

'ಬುಡಕಟ್ಟು ಸಮುದಾಯಕ್ಕೆ ಸೇರಿದ 25,000 ವಿದ್ಯಾರ್ಥಿಗಳು 108 ನಿಮಿಷ ಸೂರ್ಯ ನಮಸ್ಕಾರ ಮಾಡಲಿದ್ದಾರೆ. ಏಕಕಾಲದಲ್ಲಿ ಅತಿಹೆಚ್ಚು ಮಂದಿ ಸೂರ್ಯ ನಮಸ್ಕಾರ ಮಾಡಿದ ದಾಖಲೆ ಬರೆಯುವುದು ಇದರ ಉದ್ದೇಶ' ಎಂದು ತಿಳಿಸಿದ್ದಾರೆ.

ವಿಶಾಖಪಟ್ಟಣದಲ್ಲಿ 5 ಲಕ್ಷ ಜನರನ್ನು ಒಗ್ಗೂಡಿಸುವ ಗುರಿ ಹಾಕಿಕೊಂಡಿರುವ ಸರ್ಕಾರ, ರಾಜ್ಯದಾದ್ಯಂತ ಸುಮಾರು 1 ಲಕ್ಷ ಕೇಂದ್ರಗಳಲ್ಲಿ ಏಕಕಾಲದಲ್ಲಿ ಯೋಗ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಲಕ್ಷಾಂತರ ಜನರು ಪಾಲ್ಗೊಳ್ಳುವಂತೆ ಮಾಡಲು ಉದ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.