ADVERTISEMENT

ಮಕ್ಕಳ ಮೇಲೆ ದೌರ್ಜನ್ಯಕ್ಕೂ ಕಾದಿದೆ ಗಲ್ಲು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 20:04 IST
Last Updated 28 ಡಿಸೆಂಬರ್ 2018, 20:04 IST
   

ನವದೆಹಲಿ: ಮಕ್ಕಳ ಮೇಲಿನ ಅತ್ಯಾಚಾರ ಮಾತ್ರವಲ್ಲದೇ ಲೈಂಗಿಕ ದೌರ್ಜನ್ಯ ಮತ್ತು ಇತರ ಅಪರಾಧ ಕೃತ್ಯಗಳಿಗೂ ಮರಣದಂಡನೆ ವಿಧಿಸುವ ಸಂಬಂಧ ಪೋಕ್ಸೊ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ‘ತೀವ್ರ ಸ್ವರೂಪದ ಅತ್ಯಾಚಾರ’ಕ್ಕೆ ಮಾತ್ರ ಈಗ ಮರಣದಂಡನೆ ವಿಧಿಸಲಾಗುತ್ತಿದೆ. ಪೋಕ್ಸೊ ಕಾಯ್ದೆಯ ಸಕ್ಷೆನ್–4 (ಅತ್ಯಾಚಾರ, ಮುಖ ಮೈಥುನ), ಸಕ್ಷೆನ್–5 (ಸರ್ಕಾರಿ ಅಧಿಕಾರಿಗಳಿಂದ ಅತ್ಯಾಚಾರ) ಮತ್ತು ಸಕ್ಷೆನ್–5ಕ್ಕೆ (ಲೈಂಗಿಕ ದೌರ್ಜನ್ಯ) ತಿದ್ದುಪಡಿ ತರಲಾಗುತ್ತದೆ.

ಈ ಅಪರಾಧಗಳಿಗೆ ಈಗಾಗಲೇ ನೀಡುವ ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸುವ ಜತೆಗೆ ಮರಣದಂಡನೆಗೂ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಸೂಕ್ತ ವಯಸ್ಸಿಗೂ ಮೊದಲೇ ಋತುಮತಿಯಾಗುವಂತೆ ಬಾಲಕಿಯರಿಗೆ ಹಾರ್ಮೋನ್ ಚುಚ್ಚುಮದ್ದು ನೀಡುವುದನ್ನೂ ಕಾಯ್ದೆ ವ್ಯಾಪ್ತಿಗೆ ತರುವ ಪ್ರಸ್ತಾವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.