ADVERTISEMENT

ಪೋಪ್‌ ಫ್ರಾನ್ಸಿಸ್‌ ನಿಧನ: ಭಾರತದಲ್ಲಿ ಮೂರು ದಿನ ಶೋಕಾಚರಣೆ ಘೋಷಣೆ

ಪಿಟಿಐ
Published 22 ಏಪ್ರಿಲ್ 2025, 2:35 IST
Last Updated 22 ಏಪ್ರಿಲ್ 2025, 2:35 IST
<div class="paragraphs"><p>ಪೋಪ್‌ ಫ್ರಾನ್ಸಿಸ್‌ ನಿಧನ</p></div>

ಪೋಪ್‌ ಫ್ರಾನ್ಸಿಸ್‌ ನಿಧನ

   

ರಾಯಿಟರ್ಸ್‌ ಚಿತ್ರ

ನವದೆಹಲಿ: ಪೋಪ್‌ ಫ್ರಾನ್ಸಿಸ್‌ ನಿಧನದ ಕಾರಣ ಭಾರತ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿದೆ. ಏ.21,22 ಹಾಗೂ ಪೋಪ್‌ ಅವರ ಅಂತ್ಯಕ್ರಿಯೆ ನಡೆಯುವ ದಿನ ದೇಶದಾದ್ಯಂತ ಶೋಕಾಚರಣೆ ಇರಲಿದೆ ಎಂದು ಸೋಮವಾರ ರಾತ್ರಿ ಕೇಂದ್ರ ಸರ್ಕಾರದ ಪ್ರಕಟಣೆ ಹೊರಡಿಸಿದೆ.

ADVERTISEMENT

‘ಪೋಪ್‌ ಅವರ ನಿಧನದ ಗೌರವಾರ್ಥವಾಗಿ, ಭಾರತದಾದ್ಯಂತ ಮೂರು ದಿನಗಳ ಶೋಕಾಚರಣೆಯನ್ನು ಆಚರಿಸಲಾಗುತ್ತದೆ. ನಿಗದಿಯಂತೆ ಏ.21,22ರಂದು ಹಾಗೂ ಪೋಪ್‌ ಅವರ ಅಂತ್ಯಸಂಸ್ಕಾರ ನಡೆಯವ ದಿನ ಭಾರತದಲ್ಲಿ ಶೋಕಾಚರಣೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ, ಭಾರತದಾದ್ಯಂತ ತ್ರಿವರ್ಣ ಧ್ವಜವನ್ನು ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಜತೆಗೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ನಡೆಯವುದಿಲ್ಲ’ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪೋಪ್‌ ಹುದ್ದೆಗೇರಿದ ಲ್ಯಾಟಿನ್‌ ಅಮೆರಿಕದ ಮೊದಲ ಧರ್ಮಗುರು ಆಗಿದ್ದ ಪೋಪ್‌ ಫ್ರಾನ್ಸಿಸ್‌ (88) ಅವರು ಸೋಮವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 7.35ಕ್ಕೆ ನಿಧನರಾದರು. ವಿನಮ್ರ ವ್ಯಕ್ತಿತ್ವ, ಬಡವರ ಬಗ್ಗೆ ಹೊಂದಿದ್ದ ಅಪಾರ ಕಾಳಜಿಯಿಂದ ಜಗತ್ತನ್ನೇ ಮೋಡಿ ಮಾಡಿದ್ದ ಪೋಪ್‌ ಫ್ರಾನ್ಸಿಸ್‌ ಜಗತ್ತಿನಾದ್ಯಂತ ಅಭಿಮಾನಿಗಗಳನ್ನು ಹೊಂದಿದ್ದಾರೆ. ಪೋಪ್‌ ನಿಧನಕ್ಕೆ ಜಗತ್ತು ಕಂಬನಿ ಮಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.