ADVERTISEMENT

ಪಂಜಾಬ್‌ನಲ್ಲಿ ಯೂನಿಟ್‌ ವಿದ್ಯುತ್‌ಗೆ ₹3 ಕಡಿತ, ತಕ್ಷಣದಿಂದ ಜಾರಿ

ಪಿಟಿಐ
Published 1 ನವೆಂಬರ್ 2021, 12:31 IST
Last Updated 1 ನವೆಂಬರ್ 2021, 12:31 IST
ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ
ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ   

ಚಂಡೀಗಡ: ಗೃಹಬಳಕೆ ಸಂಪರ್ಕಗಳಿಗೆ ಅನ್ವಯಿಸಿ ವಿದ್ಯುತ್‌ ದರವನ್ನು ಯೂನಿಟ್‌ಗೆ ₹ 3 ಇಳಿಸಲು ಪಂಜಾಬ್‌ನ ಸಚಿವ ಸಂಪುಟ ತೀರ್ಮಾನಿಸಿದೆ. ವಿಧಾನಸಭೆಗೆ ಚುನಾವಣೆ ಕೆಲವೇ ತಿಂಗಳಿರುವಾಗ ಈ ತೀರ್ಮಾನ ಹೊರಬಿದ್ದಿದೆ.

ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಈ ನಿರ್ಧಾರ ಪ್ರಕಟಿಸಿದರು. ವಿದ್ಯುತ್ ದರವನ್ನು ಯೂನಿಟ್‌ಗೆ ₹ 3 ಇಳಿಸುವುದರಿಂದ ಬೊಕ್ಕಸಕ್ಕೆ ವಾರ್ಷಿಕ ₹ 3,316 ಕೋಟಿ ಹೊರೆ ಬೀಳಲಿದೆ.

ಜನತೆಗೆ ಇದು ದೀಪಾವಳಿ ಕೊಡುಗೆ. ತಕ್ಷಣದಿಂದ ಜಾರಿಗೆ ಬರುವಂತೆ ಈ ತೀರ್ಮಾನ ಜಾರಿಗೆ ಬರಲಿದೆ. ಈಚೆಗೆ ನಡೆಸಿದ್ದ ಸಮೀಕ್ಷೆಯಲ್ಲಿ ಗುಣಮಟ್ಟದ, ಅಗ್ಗದ ದರದ ವಿದ್ಯುತ್ ಸಿಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.