ADVERTISEMENT

ಹಿರಿಯ ನಟ ಅನಂತನಾಗ್, ಸೂರ್ಯಪ್ರಕಾಶ್‌ರಿಗೆ ‘ಪದ್ಮಭೂಷಣ’ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮೇ 2025, 14:47 IST
Last Updated 27 ಮೇ 2025, 14:47 IST
<div class="paragraphs"><p>ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು&nbsp;ನಟ ಅನಂತನಾಗ್ ಅವರಿಗೆ&nbsp;‘ಪದ್ಮಭೂಷಣ’ ಪ್ರಶಸ್ತಿ ಪ್ರದಾನ ಮಾಡಿದರು.</p></div>

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಟ ಅನಂತನಾಗ್ ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿ ಪ್ರದಾನ ಮಾಡಿದರು.

   

ನವದೆಹಲಿ: ಕನ್ನಡದ ಹಿರಿಯ ನಟ ಅನಂತನಾಗ್, ಹೆಸರಾಂತ ವಯೊಲಿನ್ ವಾದಕ ಲಕ್ಷ್ಮಿನಾರಾಯಣ ಸುಬ್ರಮಣಿಯಂ, ಪ್ರಸಿದ್ಧ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ, ತೊಗಲು ಬೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಸೇರಿ ರಾಜ್ಯದ 9 ಮಹನೀಯರಿಗೆ ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.

ADVERTISEMENT

ಈ ಬಾರಿ 7 ಸಾಧಕರು ‘ಪದ್ಮವಿಭೂಷಣ’, 19 ಸಾಧಕರು ‘ಪದ್ಮಭೂಷಣ’ ಮತ್ತು 113 ಮಂದಿ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕದ 9 ಸಾಧಕರ ಪೈಕಿ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಅವರು ಕಲಾ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಪದ್ಮವಿಭೂಷಣ’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ‘ಪ್ರಜಾವಾಣಿ’ ಅಂಕಣಕಾರರಾದ ಎ.ಸೂರ್ಯಪ್ರಕಾಶ್ ಅವರು ಮತ್ತು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್‌ ಅವರು ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಕಲಾ ಕ್ಷೇತ್ರದ ಸಾಧನೆಗಾಗಿ ಬಾಗಲಕೋಟೆಯ ಭೀಮಮ್ಮ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ಹಾಸನ್‌ ರಘು, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಪ್ರಶಾಂತ್ ಪ್ರಕಾಶ್‌, ಕಲಾ ಕ್ಷೇತ್ರದ ಸಾಧನೆಗಾಗಿ ರಿಕಿ ಗ್ಯಾನ್‌ ಕೇಜ್, ಜಾನಪದ ಗಾಯಕ ವೆಂಕಪ್ಪ ಅಂಭಾಜಿ ಸುಗತೇಕರ, ಕ್ಯಾನ್ಸರ್‌ ರೋಗ ಚಿಕಿತ್ಸಾ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತ ಪ್ರಮುಖರು: ಚಿತ್ರನಿರ್ದೇಶಕ ಎಂ.ಟಿ.ವಾಸುದೇವನ್‌ ನಾಯರ್ (ಮರಣೋತ್ತರ), ವಿಶ್ರಾಂತ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ‘ಪದ್ಮವಿಭೂಷಣ’ ಪುರಸ್ಕೃತರಲ್ಲಿ ಸೇರಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ ಜೋಶಿ, ಗಝಲ್‌ ಗಾಯಕ ಪಂಕಜ್‌ ಉದಾಸ್‌ (ಇಬ್ಬರಿಗೂ ಮರಣೋತ್ತರ), ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ, ಹಾಕಿ ಕ್ರೀಡಾಪಟು ಪಿ.ಆರ್.ಶ್ರೀಜೇಶ್‌ ಅವರು ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.

ಕ್ರಿಕೆಟ್‌ ಆಟಗಾರ, ಭಾರತ ತಂಡದ ಮಾಜಿ ಸದಸ್ಯ ಆರ್.ಅಶ್ವಿನ್ ಸೇರಿ 113 ಮಹನೀಯರು ವಿವಿಧ ಕ್ಷೇತ್ರಗಳ ಗಣನೀಯ ಸಾಧನೆಗೆ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.