ADVERTISEMENT

ಮಹಾರಾಷ್ಟ್ರ | ಸಂವಿಧಾನ ಪ್ರತಿಕೃತಿ ಧ್ವಂಸ: ಭುಗಿಲೆದ್ದ ಹಿಂಸಾಚಾರ

ಜಿಲ್ಲಾಧಿಕಾರಿ ಕಚೇರಿಗೆ ಹಾನಿ * ಪೊಲೀಸರಿಂದ ಆಶ್ರು ವಾಯು ಶೆಲ್ ಪ್ರಯೋಗ

ಪಿಟಿಐ
Published 11 ಡಿಸೆಂಬರ್ 2024, 16:02 IST
Last Updated 11 ಡಿಸೆಂಬರ್ 2024, 16:02 IST
<div class="paragraphs"><p>ಪರ್ಭಣಿಯಲ್ಲಿ ಪ್ರತಿಭಟನಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು </p></div>

ಪರ್ಭಣಿಯಲ್ಲಿ ಪ್ರತಿಭಟನಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು

   

– ಪಿಟಿಐ ಚಿತ್ರ

ಛತ್ರಪತಿ ಸಂಭಾಜಿನಗರ: ಸಂವಿಧಾನದ ಪ್ರತಿಕೃತಿ ನಾಶಗೊಳಿಸಿರುವುದನ್ನು ಖಂಡಿಸಿ ಮಹಾರಾಷ್ಟ್ರದ ಪರ್ಭಣಿ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಬುಧವಾರ ಕೂಡ ಹಿಂಸಾಚಾರ ಸ್ವರೂಪ ಪಡೆಯಿತು.

ADVERTISEMENT

ಪರ್ಭಣಿ ರೈಲು ನಿಲ್ದಾಣದ ಆವರಣದಲ್ಲಿನ ಅಂಬೇಡ್ಕರ್‌ ಮೂರ್ತಿಯ ಬಳಿ ಇರಿಸಲಾಗಿದ್ದ ಸಂವಿಧಾನದ ಪ್ರತಿಕೃತಿಯನ್ನು ದುಷ್ಕರ್ಮಿಗಳು ಮಂಗಳವಾರ ಧ್ವಂಸಗೊಳಿಸಿದ್ದರು. ಅದನ್ನು ಖಂಡಿಸಿ ಆರಂಭಗೊಂಡಿದ್ದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು.

‘ಅಂಬೇಡ್ಕರ್‌ ಅಭಿಮಾನಿಗಳು ನಡೆಸುತ್ತಿದ್ದ ಬಂದ್‌ ಮಧ್ಯೆ ಗುಂಪೊಂದು ಜಿಲ್ಲಾಧಿಕಾರಿಗಳ ಕಚೇರಿಯನ್ನು ಧ್ವಂಸಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕೃತಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಬುಧವಾರ ಬೆಳಿಗ್ಗೆ ಮತ್ತೆ ಪ್ರತಿಭಟನೆ ಆರಂಭಗೊಂಡಿದೆ.

ಅಂಗಡಿಯೊಂದರ ಹೊರಗೆ ಇರಿಸಲಾಗಿದ್ದ ಪೈಪ್‌ನ ರಾಶಿಗೆ ಮಧ್ಯಾಹ್ನದ ವೇಳೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಪೊಲೀಸರು ಆಶ್ರುವಾಯು ಶೆಲ್ ಪ್ರಯೋಗ ಮಾಡಿ ಪ್ರತಿಭಟನಕಾರರನ್ನು ಚದುರಿಸಿದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಸಂವಿಧಾನ ಪ್ರತಿಕೃತಿ ಧ್ವಂಸ ಪ್ರಕರಣದಲ್ಲಿ ಯಾರ ಕೈವಾಡವಿದೆ ಎಂದು ಪತ್ತೆಹಚ್ಚಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನೂರಾರು ಪ್ರತಿಭಟನಾಕಾರರು ಜಮಾಯಿಸಿದ್ದರು. ಅವರಲ್ಲಿ ಕೆಲವರು ಕಚೇರಿಯ ಒಳಗೆ ನುಗ್ಗಿ ಪೀಠೋಪಕರಣ ಮತ್ತು ಕಿಟಕಿ ಗಾಜುಗಳನ್ನು ಒಡದು ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಜಿಲ್ಲೆಯ ವಸ್ಮತ್‌ ಪ್ರದೇಶದಲ್ಲೂ ಬಂದ್‌ ನಡೆದಿದೆ. ಮಂಗಳವಾರ ಸಂಜೆ ಪರ್ಭಣಿ ರೈಲು ನಿಲ್ದಾಣದ ಬಳಿ ರೈಲು ತಡೆ ನಡೆಸಿದ ಪ್ರತಿಭಟನಕಾರರು ಲೋಕೋಪೈಲಟ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.