ADVERTISEMENT

ಪಂಜಾಬ್ ಜನತೆಯ ಭಾವನೆಗಳೊಂದಿಗೆ ಆಟವಾಡಬಾರದು: ಕೇಂದ್ರಕ್ಕೆ ಮಾನ್

ಪಿಟಿಐ
Published 18 ನವೆಂಬರ್ 2025, 10:42 IST
Last Updated 18 ನವೆಂಬರ್ 2025, 10:42 IST
<div class="paragraphs"><p>ಭಗವಂತ್ ಮಾನ್</p></div>

ಭಗವಂತ್ ಮಾನ್

   

(ಪಿಟಿಐ ಚಿತ್ರ)

ನವದೆಹಲಿ: 'ಕೇಂದ್ರ ಸರ್ಕಾರವು ಪಂಜಾಬ್ ಜನತೆಯ ಭಾವನೆಗಳೊಂದಿಗೆ ಆಟವಾಡಬಾರದು' ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು (ಮಂಗಳವಾರ) ಹೇಳಿದ್ದಾರೆ.

ADVERTISEMENT

'ನೆರೆಯ ರಾಜ್ಯಗಳೊಂದಿಗೆ ನದಿ ನೀರು ಹಂಚಿಕೆ ಸೇರಿದಂತೆ ಪ್ರಮುಖ ಸಮಸ್ಯೆಗಳು ಮತ್ತು ಪಂಜಾಬ್ ವಿಶ್ವವಿದ್ಯಾಲಯ ನವೀಕರಣ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಮುಂದೂಡಲು ಕೇಂದ್ರ ನಿರ್ಧರಿಸಿದೆ' ಎಂದು ಮಾನ್ ಆರೋಪಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಫರೀದಾಬಾದ್‌ನಲ್ಲಿ ನಡದೆ ಉತ್ತರ ವಲಯ ಮಂಡಳಿಯ 32ನೇ ಸಭೆಯ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

'ರಾಜ್ಯದ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ಕೇಂದ್ರವು ರಾಜ್ಯದ ಜನರ ಭಾವನೆಗಳೊಂದಿಗೆ ಆಟವಾಡಬಾರದು. ಪಂಜಾಬ್‌ನ ಹಕ್ಕುಗಳನ್ನು ಕಸಿದುಕೊಳ್ಳಲು ಬಿಡುವುದಿಲ್ಲ' ಎಂದು ಅವರು ಹೇಳಿದ್ದಾರೆ.

'ನೆರೆಯ ರಾಜ್ಯಗಳು ಎತ್ತಿರುವ ಎಲ್ಲ ಸಮಸ್ಯೆಗಳು ಪಂಜಾಬ್‌ನ ಹಕ್ಕುಗಳನ್ನು ಕಸಿದುಕೊಳ್ಳುವಂತದ್ದು, ನಾನು ಅವುಗಳನ್ನು ಬಲವಾಗಿ ವಿರೋಧಿಸುತ್ತೇವೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.