ADVERTISEMENT

ಪಂಜಾಬ್ ಸರ್ಕಾರದ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲರಿಂದ ಅನುಮತಿ ನಿರಾಕರಣೆ

ಪಿಟಿಐ
Published 21 ಸೆಪ್ಟೆಂಬರ್ 2022, 16:02 IST
Last Updated 21 ಸೆಪ್ಟೆಂಬರ್ 2022, 16:02 IST
ಭಗವಂತ ಮಾನ್
ಭಗವಂತ ಮಾನ್   

ಚಂಡೀಗಢ: ವಿಶ್ವಾಸಮತ ಸಾಬೀತುಪಡಿಸಲು ಪಂಜಾಬ್‌ನ ಆಡಳಿತರೂಢ ಎಎಪಿ ಸರ್ಕಾರವು ಕರೆದಿದ್ದ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಬುಧವಾರ ಅನುಮತಿ ನಿರಾಕರಿಸಿದ್ದಾರೆ.

ಇದರೊಂದಿಗೆ ಪಂಜಾಬ್‌ನ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆ ಎದುರಾಗಿದೆ.

ವಿಶ್ವಾಸಮತ ಸಾಬೀತುಪಡಿಸಲು ಕರೆದಿರುವ ಅಧಿವೇಶನವು ನಿಯಮಾನುಸಾರವಲ್ಲ ಎಂದು ಉಲ್ಲೇಖಿಸಿರುವ ರಾಜಭವನವು, ವಿಶೇಷ ಅಧಿವೇಶನ ಆದೇಶವನ್ನು ರದ್ದುಗೊಳಿಸಿದೆ.

ADVERTISEMENT

ವಿರೋಧ ಪಕ್ಷದ ನಾಯಕ ಪರ್ತಪ್ ಸಿಂಗ್ ಬಾಜ್ವಾ, ಕಾಂಗ್ರೆಸ್ ನಾಯಕ ಸುಖ್‌ಪಾಲ್ ಸಿಂಗ್ ಖೈರಾ, ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ, ಆಡಳಿತಾರೂಢ ಎಎಪಿ ಪಕ್ಷ ಪರವಾಗಿ ಕರೆದಿರುವ ವಿಶೇಷ ಅಧಿವೇಶನಕ್ಕೆ ಅನುಮತಿ ನಿರಾಕರಿಸುವಂತೆ ರಾಜ್ಯಪಾಲರನ್ನು ಕೋರಿದ್ದರು.

ಬಿಜೆಪಿಯು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ವಿಶ್ವಾಸಮತ ಸಾಬೀತುಪಡಿಸಲು ಸೆಪ್ಟೆಂಬರ್ 22ರಂದು ವಿಶೇಷ ವಿಧಾನಸಭಾ ಅಧಿವೇಶನ ಕರೆದಿದ್ದರು.

ಎಎಪಿ ಶಾಸಕರಿಗೆ ಬಿಜೆಪಿ ₹25 ಕೋಟಿ ಆಮಿಷವೊಡ್ಡಿ ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.