ADVERTISEMENT

ಮಾದಕ ದ್ರವ್ಯ ಕಳ್ಳಸಾಗಣೆ; ಪಂಜಾಬ್ ಸರ್ಕಾರದ ನಿಷ್ಕ್ರಿಯತೆ ವಿರುದ್ಧ ಸಿಧು ಕಿಡಿ

ಪಿಟಿಐ
Published 1 ಸೆಪ್ಟೆಂಬರ್ 2021, 2:24 IST
Last Updated 1 ಸೆಪ್ಟೆಂಬರ್ 2021, 2:24 IST
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು   

ಚಂಡೀಗಡ: ಮಾದಕದ್ರವ್ಯ ಕಳ್ಳಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಅಧಿಕಾರದಲ್ಲಿರುವ ತಮ್ಮದೇ ಸರ್ಕಾರ ಮತ್ತು ಹಿಂದಿನ ಅಕಾಲಿ ಸರ್ಕಾರದ ನಿಷ್ಕ್ರಿಯತೆ ವಿರುದ್ಧ ಪಂಜಾಬ್ ಕಾಂಗ್ರೆಸ್‌ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಆಕ್ರೋಶಗೊಂಡಿದ್ದಾರೆ.

ರಾಜ್ಯದ ಜನರು ಡ್ರಗ್ಸ್ ಕಳ್ಳಸಾಗಣೆದಾರರ ವಿರುದ್ಧ ವಿಶೇಷ ಕಾರ್ಯಪಡೆಯ ವರದಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಹೈಕೋರ್ಟ್ ನಿರ್ದೇಶನಗಳ ಹೊರತಾಗಿಯೂ ಈ ಎರಡೂ ಸರ್ಕಾರಗಳು ಪಂಜಾಬ್‌ನಲ್ಲಿ ಡ್ರಗ್ಸ್ ಮಾರಾಟ ಮಾಡುವ ಮತ್ತು ಇತರ ಕೆಲವು ದೇಶಗಳಿಗೆ ಡ್ರಗ್ಸ್ ಕಳ್ಳಸಾಗಣೆ ಮಾಡುವ 13 ಡ್ರಗ್ ಸ್ಮಗ್ಲರ್‌ಗಳನ್ನು ಭಾರತಕ್ಕೆ ಹಸ್ತಾಂತರಿಸಲು ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಡ್ರಗ್ಸ್ ಹಾವಳಿಯಿಂದ ತಮ್ಮ ಮುಗ್ದ ಮಕ್ಕಳನ್ನು ಕಳೆದುಕೊಂಡ ಪೋಷಕರುಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಐದು ವರ್ಷಗಳಿಂದ ಡ್ರಗ್ ಸ್ಮಗ್ಲರ್‌ಗಳನ್ನು ಏಕೆ ವಶಕ್ಕೆ ತೆಗೆದುಕೊಂಡಿಲ್ಲ ಎಂಬುದರ ಹಿಂದಿನ ಕಾರಣವನ್ನು ಸಾಮಾನ್ಯ ಜನರು ಕೂಡಾ ಗ್ರಹಿಸಬಲ್ಲರು. ಇದರಿಂದಾಗಿ ರಾಜಕಾರಣಿಗಳ ನಂಟು ಬಯಲಾಗಲಿದೆ ಎಂದು ಹೇಳಿದ್ದಾರೆ.

2018ರಲ್ಲಿ ಪಂಜಾಬ್ ಪೊಲೀಸ್ ವಿಶೇಷ ಕಾರ್ಯಪಡೆಯು, ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್‌ಗೆ ಡ್ರಗ್ ರಾಕೆಟ್ ಕುರಿತು ಸ್ಥಿತಿಗತಿ ವರದಿಯನ್ನು ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.