ADVERTISEMENT

ಕರ್ನಾಟಕದ ಮುಸ್ಲಿಂ ಗುತ್ತಿಗೆ ಮೀಸಲಾತಿ ಓಲೈಕೆಯ ಪರಮಾವಧಿ: ಛತ್ತೀಸಗಢ CM ಟೀಕೆ

ಪಿಟಿಐ
Published 16 ಮಾರ್ಚ್ 2025, 5:49 IST
Last Updated 16 ಮಾರ್ಚ್ 2025, 5:49 IST
<div class="paragraphs"><p>ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ</p></div>

ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ

   

– ಪಿಟಿಐ ಚಿತ್ರ

‌ರಾಯಪುರ: ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರ ‘ಓಲೈಕೆಯ ಪರಮಾವಧಿ’ ಎಂದು ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಟೀಕಿಸಿದ್ದಾರೆ.

ADVERTISEMENT

ಅಲ್ಲದೆ ಇದು ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಈ ‌ಅಸಂವಿಧಾನಿಕ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲೆಲ್ಲಾ ಸಂವಿಧಾನದ ಮೂಲ ತತ್ವದ ಕತ್ತು ಹಿಸುಕುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ನಿರ್ಧಾರವು ಸಮಾಜದಲ್ಲಿ ದ್ವೇಷವನ್ನು ಹರಡಲು ಕಾಂಗ್ರೆಸ್ ನಡೆಸಿದ ಯೋಜಿತ ಪಿತೂರಿಯಾಗಿದೆ. ನ್ಯಾಯಾಲಯಗಳು ಈಗಾಗಲೇ ಧರ್ಮಾಧಾರಿತ ಮೀಸಲಾತಿಯನ್ನು ಅಸಂವಿಧಾನಿಕ ಎಂದು ಘೋಷಿಸಿವೆ. ಇದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಕೇವಲ ಮತ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ವಂಚಿತ ವರ್ಗಗಳ ಹಕ್ಕುಗಳೊಂದಿಗೆ ಆಟವಾಡುತ್ತಿದೆ ಎಂದು ಸಾಯಿ ಹೇಳಿದ್ದಾರೆ.

ಖರ್ಗೆಯವರು ಸ್ವತಃ ಸಮಾಜದ ವಂಚಿತ ವರ್ಗದಿಂದ ಬಂದವರಾಗಿದ್ದರೂ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಪ್ರಭಾವದಿಂದ ಅವರು ತಮ್ಮದೇ ಸಮಾಜದ ವಿರುದ್ಧದ ಪಿತೂರಿಯ ಭಾಗವಾಗುತ್ತಿದ್ದಾರೆ ಎಂದು ಅವರು ನುಡಿದಿದ್ದಾರೆ.

ಖರ್ಗೆಯವರೇ ಎಚ್ಚರಿಕೆಯಿಂದಿರಿ. ಇತಿಹಾಸವು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಸಾಯಿ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.