ನವದೆಹಲಿ: ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ, ವೆಬ್‌ಕಾಸ್ಟಿಂಗ್ ಮತ್ತು ಇತರೆ ಫೋಟೊ, ವಿಡಿಯೊಗಳನ್ನು ಚುನಾವಣೆ ನಡೆದ 45 ದಿನದ ಬಳಿಕ ಅಳಿಸಿಹಾಕಬೇಕು ಎನ್ನುವ ಚುನಾವಣಾ ಆಯೋಗದ ನಿರ್ದೇಶನದ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಮತದಾರರ ಪಟ್ಟಿ, ಚುನಾವಣಾ ದತ್ತಾಂಶಗಳನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ. ರಾಹುಲ್ ಅವರ ಆರೋಪಗಳನ್ನು ತಳ್ಳಿಹಾಕಿರುವ ಆಯೋಗವು, ಈ ಬೇಡಿಕೆಯು ಜನಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದೆ.
ಮ್ಯಾಚ್‌ಫಿಕ್ಸಿಂಗ್ ನಡೆದಿದೆ: ರಾಹುಲ್
ಕಾನೂನು ಬದಲಿಸಿ ಸಿ.ಸಿ.ಟಿ.ವಿ. ದೃಶ್ಯಾವಳಿ, ಮತದಾರರ ಪಟ್ಟಿಗಳನ್ನು ಮರೆಮಾಚಲಾಗುತ್ತಿದೆ
ಚುನಾವಣಾ ಫೋಟೊ, ವಿಡಿಯೊ ಒಂದು ವರ್ಷದ ಬಳಿಕವಲ್ಲ, 45 ದಿನಗಳಲ್ಲೇ ನಾಶವಾಗುತ್ತಿವೆ
ಯಾರು ಜನರ ಪ್ರಶ್ನೆಗೆ ಉತ್ತರ ನೀಡಬೇಕಿತ್ತೋ ಅವರೇ ಸಾಕ್ಷ್ಯನಾಶಕ್ಕೆ ಮುಂದಾಗಿದ್ದಾರೆ
ಚುನಾವಣೆಗೆ ಸಂಬಂಧಿಸಿದಂತೆ ಒಳ ಒಪ್ಪಂದ ನಡೆದಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ
ಒಳ ಒಪ್ಪಂದ ನಡೆದಿರುವ ಚುನಾವಣೆಯು ಪ್ರಜಾಪ್ರಭುತ್ವದ ಪಾಲಿಗೆ ವಿಷವಾಗಿ ಪರಿಣಮಿಸುತ್ತದೆ
ಮತದಾರರ ಭದ್ರತೆಗೆ ಆದ್ಯತೆ: ಚುನಾವಣಾ ಆಯೋಗ
ದಾಖಲೆಗಳನ್ನು ಸಾರ್ವಜನಿಕಗೊಳಿಸುವುದು ಮತದಾರರ ಖಾಸಗೀತನದ ಉಲ್ಲಂಘನೆಯಾಗುತ್ತದೆ
ಮತದಾರರ ಭದ್ರತೆ, ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ಸುರಕ್ಷತೆಯ ವಿಚಾರದಲ್ಲಿ ರಾಜಿಯಾಗುವುದಿಲ್ಲ
1950–51 ಜನಪ್ರತಿನಿಧಿ ಕಾಯ್ದೆ, ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಈ ಬೇಡಿಕೆ ಉಲ್ಲಂಘಿಸುತ್ತಿದೆ
ಯಾವ ಮತದಾರ ಯಾವ ಪಕ್ಷ/ವ್ಯಕ್ತಿಗೆ ಮತ ನೀಡಿದ್ದಾರೆಂದು ವಿಡಿಯೊದಲ್ಲಿ ಗುರುತಿಸಬಹುದು
ಇದರಿಂದ ಮತದಾರರು ಸಮಾಜ ಘಾತುಕ ಶಕ್ತಿಗಳಿಂದ ಒತ್ತಡ, ಬೆದರಿಕೆ ಎದುರಿಸಬೇಕಾಗುತ್ತದೆ
ಚುನಾವಣೆ ಪ್ರಕ್ರಿಯೆಯನ್ನು ರೆಕಾರ್ಡ್ ಮಾಡುವುದು ಕಡ್ಡಾಯವಲ್ಲ, ಇದು ಆಯೋಗದ ಆಂತರಿಕ ನಿರ್ವಹಣಾ ಸಾಧನವಷ್ಟೇ
45 ದಿನಗಳ ಒಳಗೆ ಫಲಿತಾಂಶ ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾದರೆ, ಅಂಥ ವಿಡಿಯೊ ಅಳಿಸಿಹಾಕುವುದಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.