
ಧುರಂಧರ್ ಚಿತ್ರದ ಪೋಸ್ಟರ್– ರಾಹುಲ್ ಗಾಂಧಿ
ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರ ಒಟಿಟಿ ವೇದಿಕೆ 'ನೆಟ್‌ಫ್ಲಿಕ್ಸ್'ನಲ್ಲಿ ಬಿಡುಗಡೆಯಾಗಿದೆ. ಆದರೆ ಇದೀಗ ಈ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರ ಹೆಸರು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೂ ಧುರಂದರ್ ಸಿನಿಮಾಗೂ ಸಂಬಂಧ ಇದೆಯೇ? ಹಾಗಾದರೆ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ರಾಹುಲ್ ಗಾಂಧಿಯೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
ಒಟಿಟಿ ವೇದಿಕೆಯಲ್ಲಿ ಸಿನಿಮಾ ವೀಕ್ಷಿಸಿದ ನೆಟ್ಟಿಗರೊಬ್ಬರು ಪೋಸ್ಟ್ ಹಂಚಿಕೊಂಡಿದ್ದು, 'ಸಿನಿಮಾ ಆರಂಭದಲ್ಲಿ ಬರುವ ಸಿನಿಮಾದ ಕ್ರೆಡಿಕ್ಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕ 'ರಾಹುಲ್ ಗಾಂಧಿ' ಎಂಬ ಹೆಸರು ಬರುತ್ತದೆ. ಆದರೆ, ನಮಗೆ ತಿಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಈ ಸಿನಿಮಾ ಕಾರ್ಯನಿರ್ವಾಹಕ ನಿರ್ಮಾಪಕ ರಾಹುಲ್ ಗಾಂಧಿ ಇಬ್ಬರು ಒಬ್ಬರೇನಾ ಅಥವಾ ಬೇರೆಯವರೇ' ಎಂದು ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಕೆಲವರು ಈ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ರಾಹುಲ್ ಗಾಂಧಿಯೇ ಎಂದೂ ತಿಳಿಯಲು ಚಿತ್ರವನ್ನು ನೋಡಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಮತ್ತೊಬ್ಬರೂ ಧುರಂಧರ್ ಚಿತ್ರದ ನಿರ್ಮಾಪಕ ರಾಹುಲ್ ಗಾಂಧಿ ಎಂದು ಬರೆದುಕೊಂಡಿದ್ದಾರೆ.
ಆದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕರಲ್ಲ. 'ದಿ ಫ್ಯಾಮಿಲಿ ಮ್ಯಾನ್', 'ರಾಕೆಟ್ ಬಾಯ್ಸ್' ಮತ್ತು 'ಲಕ್ಕಿ ಬಾಸ್ಕರ್‌ನಂತಹ' ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯ ಹೆಸರು ರಾಹುಲ್ ಗಾಂಧಿ, ಇವರೇ ಈ ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕ. ಕಾಕತಾಳೀಯ ಎಂಬಂತೆ ಇಬ್ಬರೂ ಹೆಸರು ಒಂದೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.