ADVERTISEMENT

ಫಲಿತಾಂಶ ವಿಶ್ಲೇಷಣೆ | ವಯನಾಡ್ ಮುನ್ನಡೆ, ಅಮೇಠಿ ಹಿನ್ನಡೆ– ರಾಹುಲ್‌ಗೆ ಹೀಗೇಕಾಯ್ತ

ಪ್ರಜಾವಾಣಿ ವಿಶೇಷ
Published 23 ಮೇ 2019, 12:01 IST
Last Updated 23 ಮೇ 2019, 12:01 IST
   

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ಕೇರಳದವಯನಾಡ್ ಮತ್ತು ಉತ್ತರ ಪ್ರದೇಶದಅಮೇಠಿ ಕ್ಷೇತ್ರಗಳ ಬಗ್ಗೆ ಜನರಲ್ಲಿ ತೀವ್ರ ಕುತೂಹಲವಿದೆ. ಜನರ ನಾಡಿಮಿಡಿತ ಅರಿಯಲೆಂದು ವಯನಾಡ್‌ ಕ್ಷೇತ್ರದಲ್ಲಿ ಸಂಚರಿಸಿದ್ದ ‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ.ಹನೀಫ್ ಮತ್ತು ಅಮೇಠಿಯಲ್ಲಿ ಸಂಚರಿಸಿದ್ದ ‘ಡೆಕ್ಕನ್ ಹೆರಾಲ್ಡ್‌‘ನ ಡೆಪ್ಯುಟಿ ಎಡಿಟರ್ ಬಿ.ಎಸ್.ಅರುಣ್ ಎರಡೂ ಕ್ಷೇತ್ರಗಳ ಫಲಿತಾಂಶದ ಬಗ್ಗೆ ವಿಶ್ಲೇಷಿಸಿದ್ದಾರೆ.

ಹನೀಫ್: ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ನಾನು ವಯನಾಡ್‌ ಕ್ಷೇತ್ರದಲ್ಲಿ ಸಂಚರಿಸಿ ಜನರ ನಾಡಿಮಿಡಿತ ಅರಿಯಲು ಪ್ರಯತ್ನ ಮಾಡಿದೆ.ನನ್ನ ಜೊತೆಗಿರುವಬಿ.ಎಸ್.ಅರುಣ್ ಅಮೇಠಿ ಸೇರಿದಂತೆ ಉತ್ತರ ಪ್ರದೇಶದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಜನರನ್ನು ಮಾತನಾಡಿಸಿದ್ದರು. ರಾಹುಲ್ ಗಾಂಧಿ ಸ್ಪರ್ಧೆಯ ಕಾರಣದಿಂದ ದೇಶದ ಗಮನ ಸೆಳೆದಿರುವ ಈ ಎರಡೂ ಕ್ಷೇತ್ರಗಳ ಈ ಹೊತ್ತಿನ ಫಲಿತಾಂಶದ ಬಗ್ಗೆ ನಾವೀಗ ಮಾತನಾಡ್ತೀವಿ.

ಕಾಂಗ್ರೆಸ್‌ಗೆ ಸ್ವೀಪ್ ಎನ್ನುವಂಥ ಫಲಿತಾಂಶ ಕೊಟ್ಟಿರುವುದು ಕೇರಳ. 29 ಕ್ಷೇತ್ರಗಳಪೈಕಿ 19ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಅಳಪ್ಪುಳಂನಲ್ಲಿ ಮಾತ್ರ ಎಡರಂಗದ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಮುನ್ನಡೆ ಸಾಧಿಸಿರುವ 19 ಕ್ಷೇತ್ರಗಳ ಪೈಕಿ ವಯನಾಡ್ ಮಹತ್ವದ ಕ್ಷೇತ್ರ. ಇಲ್ಲಿ ರಾಹುಲ್ 5 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ್ದಾರೆ. ಸಿಪಿಐನ ಸುನೀರ್ 1.95 ಲಕ್ಷ ಮತ ಗಳಿಸಿದ್ದಾರೆ. ರಾಹುಲ್ ಅವರ ಮುನ್ನಡೆಯ ಅಂತರ3.26 ಲಕ್ಷ. ವಯನಾಡ್‌ ಬಗ್ಗೆ ಆಮೇಲೆ ಮಾತಾಡೋಣ. ಮೊದಲು ಅಮೇಠಿ ಬಗ್ಗೆ ಹೇಳಿ ಅರುಣ್.

ಅರುಣ್: ಅಮೇಠಿಯಲ್ಲಿ ನಾನು ಎರಡು ದಿನ ಇದ್ದೆ. ಅಮೇಠಿ ಪಕ್ಕದಲ್ಲಿ ಗೌರಿಕಂಜ್ ಅಂತ ಇದೆ. ಅದು ಸ್ವಲ್ಪ ದೊಡ್ಡ ಊರು. ಅಲ್ಲೆಲ್ಲಾ ಹಲವು ಜನರನ್ನು ಮಾತನಾಡಿಸಿದ್ದೆ.ಒಂದಿಷ್ಟು ಹಳ್ಳಿಗಳಿಗೂ ಹೋಗಿ ಬಂದೆ. ಅಲ್ಲಿಂದ ಬಂದ ಮೇಲೆ ಬರೆದ ವಿಶ್ಲೇಷಣೆಯಲ್ಲಿ ತೀವ್ರ ಪೈಪೋಟಿ ಇರುವ ಕಣ ಎಂದೇ ಬರೆದಿದ್ದೆ.ಅಲ್ಲಿ ತೀಕ್ಷ್ಣವಾದಸ್ಪರ್ಧೆ ಇದೆ. ರಾಹುಲ್‌ಗೆ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಇಡೀ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕುತೂಹಲದ ಕ್ಷೇತ್ರ ಅಂದ್ರೆ ಅಮೇಠಿ. ಸ್ಮೃತಿ ಇರಾನಿ ಕಳೆದ ಬಾರಿ 1.07 ಲಕ್ಷ ಮತದಿಂದ ಸೋತಿದ್ರು. ಆದರೆ ಈ ಸಲ ಅಮೇಠಿಗೆ ಪದೆಪದೆ ಭೇಟಿ ನೀಡಿ ಜನರ ಒಲವು ಗಳಿಸಿದ್ದರು. ಹಾಗೆಯೇ ಕೇಂದ್ರ ಸರ್ಕಾರದ ಬಹುತೇಕ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನ ಮಾಡಿದ್ದರು.

ಹನೀಫ್:ಈ ಹೊತ್ತಿಗೆ ಸ್ಮೃತಿ 17 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.ಅಲ್ಲಿ ಕೌಂಟಿಂಗ್ ತುಂಬಾ ನಿಧಾನವಾಗಿ ನಡೀತಾ ಇದೆ ಅನ್ಸಲ್ವಾ?

ಅರುಣ್: ಉತ್ತರ ಪ್ರದೇಶ, ಬಿಹಾರಗಳಲ್ಲಿ ಸಾಮಾನ್ಯವಾಗಿ ಹಾಗೆಯೇ.ಕೌಂಟಿಂಗ್ ನಿಧಾನವಾಗಿಯೇ ನಡೆಯುತ್ತೆ. ಹಲವು ಸುತ್ತುಗಳ ಮತಎಣಿಕೆಯ ನಂತರ17 ಸಾವಿರ ಲೀಡ್ ಅಂದ್ರೆ ರಾಹುಲ್‌ಗೆ ಕಷ್ಟ ಆಗಬಹುದು. ಈ ಹಿಂದೆಯೂ ಇಂಥ ಮಾತು ಕೇಳಿ ಬರ್ತಿತ್ತು. ಅದಕ್ಕೇ ಇರಬೇಕು, ರಾಹುಲ್ ಗಾಂಧಿ ವಯನಾಡ್ ಎನ್ನುವ ಸೇಫ್ ನಿರ್ಧಾರ ತಗೊಂಡ್ರು.

ಹನೀಫ್:ರಾಹುಲ್ ಕೇರಳಕ್ಕೆ ಬಂದಿದ್ದು ಉತ್ತಮ ನಿರ್ಧಾರ. ಕೇರಳದಲ್ಲಿ ಇದು ರಾಹುಲ್ ಪರವಾತಾವರಣ ಕ್ರಿಯೇಟ್ ಮಾಡಿದೆ ಅಂತ್ಲೇ ನಾನು ಬರೆದಿದ್ದೆ.ಈಗ ಅದು ನಿಜವಾಗ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.