ADVERTISEMENT

'ಭಯೋತ್ಪಾದಕರ ಬೆಂಬಲಿಗ' ರಾಹುಲ್ ಗಾಂಧಿ; ಅಮೇಠಿಯಲ್ಲಿ ಪೋಸ್ಟರ್

ಪಿಟಿಐ
Published 30 ಏಪ್ರಿಲ್ 2025, 6:56 IST
Last Updated 30 ಏಪ್ರಿಲ್ 2025, 6:56 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ಅಮೇಠಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಅಮೇಠಿಗೆ ಭೇಟಿ ನೀಡುವ ಕೆಲವೇ ಗಂಟೆಗೂ ಮುನ್ನ ನಗರದ ಹಲವೆಡೆ ಕಾಂಗ್ರೆಸ್ ನಾಯಕನ ವಿರುದ್ಧ ಪೋಸ್ಟರ್‌ಗಳು ಪ್ರತ್ಯಕ್ಷಗೊಂಡಿವೆ.

ADVERTISEMENT

'ಭಯೋತ್ಪಾದಕರ ಬೆಂಬಲಿಗ' ರಾಹುಲ್ ಗಾಂಧಿ ಎಂಬ ಪೋಸ್ಟರ್ ಹಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿವೆ. ಕಾಂಗ್ರೆಸ್ ಕಚೇರಿಯ ಸಮೀಪ ಹಾಗೂ ಸ್ಥಳೀಯ ಬಸ್ ನಿಲ್ದಾಣದಲ್ಲೂ ಪೋಸ್ಟರ್ ಅಂಟಿಸಲಾಗಿದೆ.

ಪೊಲೀಸರ ಬಿಗಿ ಭದ್ರತೆಯ ನಡುವೆಯೂ ಕಿಡಿಗೇಡಿಗಳ ಪೋಸ್ಟರ್ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಡುವ ಭೀತಿಯಿದೆ.

ರಾಹುಲ್ ಗಾಂಧಿ ಮಂಗಳವಾರದಂದು ತಮ್ಮ ಸ್ವಕ್ಷೇತ್ರವಾದ ರಾಯ್‌ಬರೇಲಿಗೆ ಭೇಟಿ ನೀಡಿದ್ದರು. ಇಂದು ಅಮೇಠಿಗೆ ಭೇಟಿ ನೀಡಲಿದ್ದು, ಬಳಿಕ ಕಾನ್ಪುರಕ್ಕೆ ತೆರಳಲಿದ್ದಾರೆ.

ಅಲ್ಲಿ ಅವರು ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಕಾನ್ಪುರದ ಉದ್ಯಮಿ ಶುಭಂ ದ್ವಿವೇದಿ ಅವರ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಭಯೋತ್ಪಾದಕರ ಹಾಗೂ ಪಾಕಿಸ್ತಾನದ ಪರವಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.