ADVERTISEMENT

RailOne ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಿದರೆ ಶೇ 3ರಷ್ಟು ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 14:18 IST
Last Updated 30 ಡಿಸೆಂಬರ್ 2025, 14:18 IST
   

ನವದೆಹಲಿ: ‘ರೈಲ್‌ಒನ್‌’ ಅ‍ಪ್ಲಿಕೇಷನ್‌ ಮೂಲಕ ಕಾಯ್ದಿರಿಸದ ಟಿಕೆಟ್‌ ಖರೀದಿಸುವ ಪ್ರಯಾಣಿಕರಿಗೆ ಒಟ್ಟು ಮೊತ್ತದಲ್ಲಿ ಶೇ 3ರಷ್ಟು ರಿಯಾಯಿತಿ ಕೊಡುಗೆಯನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ. 

2026ರ ಜನವರಿ 14ರಿಂದ ಜುಲೈ 14ರವರೆಗೆ ಈ ಕೊಡುಗೆ ಲಭಿಸಲಿದೆ. ಗ್ರಾಹಕರು ‘ರೈಲ್‌ಒನ್‌ ಆ್ಯಪ್‌’ ಮೂಲಕ ‘ಆರ್‌– ವ್ಯಾಲಟ್‌’ ಬಳಸಿ ಟಿಕೆಟ್‌ ಖರೀದಿಸಿದಾಗ ಮಾತ್ರ ಈ ಕೊಡುಗೆ ಲಭಿಸಲಿದೆ. ಇತರೆ ಅಪ್ಲಿಕೇಷನ್‌ ಅಥವಾ ಡಿಜಿಟಲ್ ವೇದಿಕೆಗಳ ಮೂಲಕ ಕಾಯ್ದಿರಿಸುವ ಟಿಕೆಟ್‌ಗಳಿಗೆ ಈ ರಿಯಾಯಿತಿ ಇರುವುದಿಲ್ಲ ಎಂದು ರೈಲ್ವೆ ಸಚಿವಾಲಯ ಹೇಳಿದೆ. 

ರಿಯಾಯಿತಿ ಕೊಡುಗೆಗೆ ಸಂಬಂಧಿಸಿದಂತೆ ರೈಲ್‌ಒನ್‌ ಅಪ್ಲಿಕೇಷನ್‌ ತಂತ್ರಾಂಶದಲ್ಲಿ ಅಗತ್ಯ ಬದಲಾವಣೆ ತರುವಂತೆ ಸಚಿವಾಲಯವು, ರೈಲ್ವೆ ಮಾಹಿತಿ ವ್ಯವಸ್ಥೆಯ ಕೇಂದ್ರಕ್ಕೆ (ಸಿಆರ್‌ಐಎಸ್‌) ಸೂಚನೆ ನೀಡಿದೆ.

ADVERTISEMENT

ರೈಲ್‌ಒನ್‌ ಅಪ್ಲಿಕೇಷನ್‌ ಮೂಲಕ ಟಿಕೆಟ್‌ ಖರೀದಿಸುವಾಗ ‘ಆರ್‌–ವ್ಯಾಲಟ್‌’ ಮೂಲಕ ಪಾವತಿ ಮಾಡಿದರೆ ಈಗಾಗಲೇ ಜಾರಿಯಲ್ಲಿರುವ ಶೇ 3ರಷ್ಟು ’ಕ್ಯಾಶ್‌ಬ್ಯಾಕ್‌ ಕೊಡುಗೆ’ಯು ಹಿಂದಿನಂತೆಯೇ ಮುಂದುವರಿಯಲಿದೆ ಎಂದೂ ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.