ಸಾವು
(ಪ್ರಾತಿನಿಧಿಕ ಚಿತ್ರ)
ಇಂದೋರ್: ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಯಾಗಿರುವ ಅವರ ಪತ್ನಿ ಸೋನಮ್ ಅವರ, ಇಂದೋರ್‌ನ ಗೋವಿಂದ ನಗರದ ತವರು ಮನೆಗೆ ಭೇಟಿ ನೀಡಿದ ಮೇಘಾಲಯ ಪೊಲೀಸರು, ಅವರ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದರು.
ಇಂದೋರ್ ಮೂಲಕ ಉದ್ಯಮಿ ರಾಜಾ ರಘುವಂಶಿ, ಪತ್ನಿ ಸೋನಮ್ ಜತೆ ಮೇಘಾಲಯಕ್ಕೆ ಮಧುಚಂದ್ರಕ್ಕೆ ಬಂದಿದ್ದಾಗ ಮೇ 23ರಂದು ಕೊಲೆಯಾಗಿದ್ದರು.
‘ಮೇಘಾಲಯ ಪೊಲೀಸರು ತಮ್ಮನ್ನೂ ಸೇರಿ ಕಟುಂಬಸ್ಥರ ಬಳಿ ಸೋನಮ್ ಅವರ ನಡವಳಿಕೆ ಕುರಿತು ಮಾಹಿತಿ ಸಂಗ್ರಹಿಸಿದರು’ ಎಂದು ವಿಚಾರಣೆ ಬಳಿಕ ಸೋನಮ್ ಅವರ ಸಹೋದರ ಗೋವಿಂದ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.