ADVERTISEMENT

ಸಂಜೀವನಿ ಕ್ರೆಡಿಟ್ ಸೊಸೈಟಿ ಹಗರಣದಲ್ಲಿ ಶೇಖಾವತ್ ಭಾಗಿ: ಗೆಹಲೋತ್‌ ಆರೋಪ

ಪಿಟಿಐ
Published 22 ಫೆಬ್ರುವರಿ 2023, 4:05 IST
Last Updated 22 ಫೆಬ್ರುವರಿ 2023, 4:05 IST
ಮುಖ್ಯಮಂತ್ರಿ ಅಶೋಕ್ ಗೆಹಲೋತ್‌
ಮುಖ್ಯಮಂತ್ರಿ ಅಶೋಕ್ ಗೆಹಲೋತ್‌   

ಜೈಪುರ: ಸಂಜೀವನಿ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಹಗರಣದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭಾಗಿಯಾಗಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಮಂಗಳವಾರ ಆರೋಪಿಸಿದ್ದಾರೆ.

ಸಂಜೀವಿನಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಒಂದು ಲಕ್ಷಕ್ಕೂ ಹೆಚ್ಚು ಸಂತ್ರಸ್ತರ ಜೀವಮಾನದ ಠೇವಣಿಗಳನ್ನು ಲೂಟಿ ಮಾಡಿದ್ದು, ಸುಮಾರು ₹ 900 ಕೋಟಿ ಅವ್ಯವಹಾರ ನಡೆದಿದೆ. ಪೊಲೀಸ್ ತನಿಖೆಯಲ್ಲಿ ಶೇಖಾವತ್ ಕೈವಾಡ ಸಾಬೀತಾಗಿದೆ ಎಂದು ಹೇಳಿದ್ದಾರೆ.

‘ಈ ಪ್ರಕರಣದಲ್ಲಿ, ಆಸ್ತಿಯನ್ನು ಲಗತ್ತಿಸುವ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇದೆಯೇ ಹೊರತು ಎಸ್‌ಒಜಿಗೆ ಅಲ್ಲ’. ಶೇಖಾವತ್ ಈ ಪ್ರಕರಣದಲ್ಲಿ ಸಾರ್ವಜನಿಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೆಹಲೋತ್‌ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಸಂಜೀವನಿ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಗೆ ಸಂಬಂಧಿಸಿದ ಆಸ್ತಿಗಳ ದಾಖಲೆ ಒದಗಿಸುವಂತೆ ಎಸ್‌ಒಜಿ ಕಳೆದ ಎರಡು ವರ್ಷಗಳಲ್ಲಿ ಐದು ಬಾರಿ ಇಡಿಯನ್ನು ಒತ್ತಾಯಿಸಿದೆ ಎಂದು ಗೆಹಲೋತ್‌ ಹೇಳಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕನ ಮಗನನ್ನು ಸೋಲಿಸಿದ್ದರಿಂದ ಹತಾಶೆಯಿಂದಾಗಿ ಗೆಹ್ಲೋಟ್ ಈ ರೀತಿ ತಮ್ಮ ಹೆಸರನ್ನು ಹಾಳು ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಶೇಖಾವತ್ ಪ್ರತ್ಯಾರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.