ADVERTISEMENT

ಇಂದು ಫ್ರಾನ್ಸ್‌ನಲ್ಲಿ ರಫೇಲ್ ಯುದ್ಧವಿಮಾನ ಹಸ್ತಾಂತರ: ರಾಜನಾಥ್ ಸಿಂಗ್‌ರಿಂದ ಪೂಜೆ

ಏಜೆನ್ಸೀಸ್
Published 8 ಅಕ್ಟೋಬರ್ 2019, 2:32 IST
Last Updated 8 ಅಕ್ಟೋಬರ್ 2019, 2:32 IST
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್    

ನವದೆಹಲಿ:‘ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ಪ್ರವಾಸಕ್ಕೆ ಫ್ರಾನ್ಸ್‌ಗೆ ಆಗಮಿಸಿದ್ದುಮಂಗಳವಾರ ಪ್ಯಾರಿಸ್‌ನಲ್ಲಿ ರಫೇಲ್ ಯುದ್ಧ ವಿಮಾನವನ್ನುಹಸ್ತಾಂತರ ಮಾಡಿಕೊಳ್ಳಲಿದ್ದಾರೆ.

ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನ ಹಾಗೂ ವಿಜಯದಶಮಿದಿನವಾದ ಮಂಗಳವಾರ ಪ್ಯಾರಿಸ್‌ನಲ್ಲೆ ರಫೇಲ್ ಯುದ್ಧ ವಿಮಾನಕ್ಕೆ ‘ಶಸ್ತ್ರ ಪೂಜೆ’ಸಲ್ಲಿಸಲಿದ್ದಾರೆ.

‘ವಿಮಾನ ಹಸ್ತಾಂತರವಾದ ಬಳಿಕ, ರಫೇಲ್ ಯುದ್ಧವಿಮಾನದ ಕಾಕ್‌ಪೀಟ್‌ನಲ್ಲಿ ಕುಳಿತು ಹಾರಾಟದ ಮೊದಲ ಅನುಭವ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಹಲವು ವರ್ಷಗಳಿಂದ ರಾಜನಾಥ್ ಅವರು ದಸರಾ ವೇಳೆ ಶಸ್ತ್ರಪೂಜೆ ಮಾಡುವ ರೂಢಿ ಇರಿಸಿಕೊಂಡಿದ್ದಾರೆ. ಹಿಂದಿನ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಗೃಹಸಚಿವರಾಗಿದ್ದ ವೇಳೆಯೂ ಪೂಜೆ ನೆರವೇರಿಸಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತ ಖರೀದಿಸುತ್ತಿರುವ 36 ರಫೇಲ್‌ ಯುದ್ಧ ವಿಮಾನಗಳಲ್ಲಿ ಒಂದು ವಿಮಾನವನ್ನು ಮಾತ್ರ ಫ್ರಾನ್ಸ್‌ ಇಂದು ಹಸ್ತಾಂತರಿಸಲಿದೆ. ಆದರೆ ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಲ್ಲಿ ಭಾರತಕ್ಕೆ ಬರಲಿವೆ.

ಇಲ್ಲಿನ ಬೊರಾಡೆಕ್ಸ್‌ ಸಮೀಪದ ಮೆರಿಗ್ನ್ಯಾಕ್‌ ವಾಯುನೆಲೆಯಲ್ಲಿರಫೇಲ್ ಯುದ್ಧವಿಮಾನವನ್ನು ಹಸ್ತಾಂತರ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.