ADVERTISEMENT

ಸುಶಾಂತ್‌ ಪ್ರಕರಣ| ರಿಯಾ, ಬಿಹಾರ ಸರ್ಕಾರದಿಂದ‘ಸುಪ್ರೀಂ’ಗೆ ಲಿಖಿತ ಹೇಳಿಕೆ

ಪಿಟಿಐ
Published 13 ಆಗಸ್ಟ್ 2020, 8:28 IST
Last Updated 13 ಆಗಸ್ಟ್ 2020, 8:28 IST
ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ   

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಪಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲು ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಗುರುವಾರ ಲಿಖಿತ ಹೇಳಿಕೆ ದಾಖಲಿಸಿದೆ. ಜತೆಗೆನಟಿ ರಿಯಾ ಚಕ್ರವರ್ತಿ ಅವರೂ ಹೇಳಿಕೆ ದಾಖಲಿಸಿದ್ದಾರೆ.

ರಿಯಾ ಅರ್ಜಿ ವಜಾಗೊಳಿಸಲು ಬಿಹಾರ ಸರ್ಕಾರ ಕೋರಿದೆ. ಸರ್ಕಾರದ ವಕೀಲ ಕೇಶವ ಮೋಹನ್ ಅವರು, ಸಿಬಿಐಗೆ ಪೂರ್ಣಪ್ರಮಾಣದಲ್ಲಿ ತನಿಖೆ ನಡೆಸಲು ಅವಕಾಶವಿದ್ದು, ಯಾವುದೇ ತೊಡಕು ಇರಬಾರದು ಎಂದು ಕೋರಿದರು.

ರಿಯಾ ಅವರು ತಮ್ಮ ಮನವಿಯಲ್ಲಿ, ‘ತನ್ನ ವ್ಯಾಪ್ತಿಗೇ ಬಾರದ ಬಿಹಾರ ಪೊಲೀಸರ ಮನವಿ ಮೇರೆಗೆ ಪ್ರಕರಣ ಸಿಬಿಐಗೆ ವರ್ಗಾಯಿಸಲಾಗಿದೆ’ ಎಂದಿದ್ದಾರೆ.

ADVERTISEMENT

ಅರ್ಜಿಗೆ ಸಂಭಂಧಿಸಿದಂತೆಆಗಸ್ಟ್ 11ರಂದು ಆದೇಶ ಕಾಯ್ದಿರಿಸಿದ್ದ ಸುಪ್ರೀಂ ಕೋರ್ಟ್ ಲಿಖಿತ ಹೇಳಿಕೆ ದಾಖಲಿಸಲು ಸಂಬಂಧಿಸಿದ ಅರ್ಜಿಯ ಪ್ರತಿವಾದಿಗಳಿಗೆ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.