ದೇಶದಲ್ಲೆಡೆ ರಕ್ಷಾ ಬಂಧನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಮ್ಮು–ಕಾಶ್ಮೀರದಲ್ಲಿ ಗಡಿ ಕಾಯುವ ಯೋಧರಿಗೆ ರಾಖಿ ಕಟ್ಟುವ ಮೂಲಕ ಮಕ್ಕಳು, ಮಹಿಳೆಯರು ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಸೈನಿಕರಿಗಾಗಿ ವಿಶೇಷ ರಾಖಿ ತಯಾರಿಸಿದ ಮುಸ್ಲಿಂ ಯುವತಿಯರು
'ಥ್ಯಾಂಕ್ಸ್ ಜವಾನ್' ಅಭಿಯಾನದ ಅಡಿಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಬೋನಿಯಾರ್‌ನಲ್ಲಿ ಮುಸ್ಲಿಂ ಯುವತಿಯರು ಸೈನಿಕರಿಗಾಗಿಯೇ ವಿಶೇಷ ರಾಖಿ ತಯಾರಿಸಿದ್ದಾರೆ.
ಛತ್ತೀಸ್‌ಗಢ: ಸಿಆರ್‌ಪಿಎಫ್ ಜವಾನರಿಗೆ ರಾಖಿ ಕಟ್ಟಿದ ಮಹಿಳೆಯರು
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ರಕ್ಷಾ ಬಂಧನ ಸಂಭ್ರಮ ಮನೆ ಮಾಡಿದೆ. ಸಾಲುಗಟ್ಟಿ ಬಂದ ಮಹಿಳೆಯರು ಸಿಆರ್‌ಪಿಎಫ್ ಯೋಧರ ಕೈಗೆ ರಾಖಿ ಕಟ್ಟುವ ಮೂಲಕ ಸಹೋದರತ್ವವನ್ನು ಜಗತ್ತಿಗೆ ಸಾರಿದ್ದಾರೆ.
ಅಂತರಾಷ್ಟ್ರೀಯ ಗಡಿಯಲ್ಲಿ ರಾಖಿ ಸಂಭ್ರಮ
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿದೆ. ಬಿಎಸ್ಎಫ್ ಯೋಧರ ಕೈಗೆ ರಾಖಿ ಕಟ್ಟುವ ಮೂಲಕ ಶಾಲಾ ಮಕ್ಕಳು ಸಂತಸ ಹಂಚಿಕೊಂಡಿದ್ದಾರೆ.
ಸಿಆರ್‌ಪಿಎಫ್ ಯೋಧರಿಂದ ರಾಖಿ ಸಂಭ್ರಮ
ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ಶಾಲಾ ಬಾಲಕಿಯರು ಸಿಆರ್‌ಪಿಎಫ್ ಯೋಧರ ಕೈಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು
ಗಡಿ ಕಾಯುವ ಯೋಧರಿಗೆ ರಾಖಿ ಕೊಡುಗೆ
ಅಖ್ನೂರ್ ಸೆಕ್ಟರ್‌ನಲ್ಲಿ ದೇಶದ ಗಡಿ ಕಾಯುವ ಯೋಧರಿಗೆ ಸ್ಥಳೀಯ ಯುವತಿಯರು ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.