ADVERTISEMENT

ರಾಮಮಂದಿರದ ಬಗ್ಗೆ ಹೆಮ್ಮೆಪಡದವರು ಭಾರತೀಯರೇ ಎಂಬುದು ಅನುಮಾನ: ಯೋಗಿ

ಪಿಟಿಐ
Published 10 ಸೆಪ್ಟೆಂಬರ್ 2025, 12:53 IST
Last Updated 10 ಸೆಪ್ಟೆಂಬರ್ 2025, 12:53 IST
<div class="paragraphs"><p>ಯೋಗಿ ಆದಿತ್ಯನಾಥ</p></div>

ಯೋಗಿ ಆದಿತ್ಯನಾಥ

   

(ಪಿಟಿಐ ಚಿತ್ರ)

ಗೋರಖಪುರ: 'ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿರುವ ಭವ್ಯ ರಾಮಮಂದಿರವನ್ನು ನೋಡಿ ಯಾರಾದರೂ ಹೆಮ್ಮೆಪಟ್ಟುಕೊಳ್ಳದಿದ್ದರೆ ಅವರು ಭಾರತೀಯರೇ ಎಂದು ಅನುಮಾನಪಟ್ಟುಕೊಳ್ಳಬೇಕು' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು (ಬುಧವಾರ) ತಿಳಿಸಿದ್ದಾರೆ.

ADVERTISEMENT

ಗೋರಖನಾಥ ದೇಗುಲದ ಆವರಣದಲ್ಲಿ ಮಹಂತ್ ದಿಗ್ವಿಜಯನಾಥ್ ಅವರ 56ನೇ ಹಾಗೂ ಮಹಂತ್ ಅವೈದ್ಯನಾಥ್ ಅವರ 11ನೇ ಪುಣ್ಯತಿಥಿಯಲ್ಲಿ ಮಾತನಾಡಿದ ಆದಿತ್ಯನಾಥ, 'ಭಾರತದಲ್ಲಿ ಇದ್ದುಕೊಂಡು ಅಯೋಧ್ಯೆಯ ರಾಮಮಂದಿರದ ಬಗ್ಗೆ ಹೆಮ್ಮೆಪಟ್ಟುಕೊಳ್ಳದಿದ್ದರೆ ಅವರು ಭಾರತೀಯರೇ ಎಂಬುದೇ ಅನುಮಾನ' ಎಂದು ತಿಳಿಸಿದ್ದಾರೆ.

'ಈ ಮಹಾನ್ ವ್ಯಕ್ತಿಗಳು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಕನಸನ್ನು ಕಂಡಿದ್ದರು. ಅದೀಗ ಸಾಕಾರಗೊಂಡಿದೆ' ಎಂದು ಆದಿತ್ಯನಾಥ ಉಲ್ಲೇಖಿಸಿದ್ದಾರೆ.

'ದೇಶ ಹಾಗೂ ಧರ್ಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಂತರು ತಮ್ಮ ಬದ್ಧತೆ ಹಾಗೂ ತ್ಯಾಗದ ಮೂಲದ ಸಮಾಜ ಹಾಗೂ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದರು' ಎಂದು ಆದಿತ್ಯನಾಥ ಹೇಳಿದ್ದಾರೆ.

'ರಾಮಮಂದಿರವು ಮಹಂತರ ದೃಢ ಸಂಕಲ್ಪ ಹಾಗೂ ಹೋರಾಟದ ಸಂಕೇತವಾಗಿದೆ' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.