ADVERTISEMENT

ಪ್ರಧಾನಿ ಮೋದಿ ಚಿತ್ರದೊಂದಿಗೆ ಅವಹೇಳನಕಾರಿ ಟ್ವೀಟ್‌: ರಮ್ಯಾ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 15:41 IST
Last Updated 1 ನವೆಂಬರ್ 2018, 15:41 IST
   

ನವದೆಹಲಿ: ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ಮೇಲ್ವಿಚಾರಣೆ ನಡೆಸುತ್ತಿರುವನಟಿ ರಮ್ಯಾ, ಸರ್ದಾರ್ ವಲ್ಲಭಭಾಯ್‌ ಪಟೇಲ್‌ರ ‘ಏಕತಾ ಮೂರ್ತಿ’ ಕೆಳಗೆ ಪ್ರಧಾನಿ ನರೇಂದ್ರ ಮೋದಿ ನಿಂತಿರುವ ಚಿತ್ರದೊಂದಿಗೆ ಮಾಡಿರುವ ಟ್ವೀಟ್‌ ವಿವಾದಕ್ಕೆಕಾರಣವಾಗಿದ್ದು, ಭಾರಿ ಆಕ್ರೋಶವೂ ವ್ಯಕ್ತವಾಗಿದೆ.

‘ಏಕತಾ ಮೂರ್ತಿ’ ಪಾದದ ಬಳಿ ಮೋದಿ ನಿಂತಿರುವ ಚಿತ್ರ ಹಾಗೂ ‘ಅದು ಪಕ್ಷಿಯ ತ್ಯಾಜ್ಯವೇ?’ ಎಂಬ ಅಡಿಬರಹ ಟ್ವೀಟ್‌ನಲ್ಲಿದೆ.

ರಮ್ಯಾ ಅವರ ಟ್ವೀಟ್‌ನ್ನುಬಿಜೆಪಿ ಖಂಡಿಸಿದೆ. ‘ಇದು ಕಾಂಗ್ರೆಸ್‌ನ ನಿಜವಾದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡುವ ಅವಕಾಶವನ್ನು ಅವರು ಯಾವತ್ತೂ ಕಳೆದುಕೊಳ್ಳುವುದಿಲ್ಲ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಆರೋಪಿಸಿದ್ದಾರೆ.

ADVERTISEMENT

‘ಈ ದೇಶದ ಸಾಮಾನ್ಯ ಪ್ರಜೆ ಕಾಂಗ್ರೆಸ್‌ ಪಾಲಿಗೆ ಪಕ್ಷಿಯ ತ್ಯಾಜ್ಯದಂತೆ ಕಂಡರೆ, ವಂಶವೊಂದು ಅಧಿಕಾರದ ಕೇಂದ್ರವಾಗಿ ಕಾಣುತ್ತದೆ. ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ಅವಹೇಳನ ಮಾಡುತ್ತಿರುವ ವಂಶದ ದುರಹಂಕಾರವನ್ನೂ ಇದು ತೋರುತ್ತದೆ’ ಎಂದು ಅವರು ಹರಿಹಾಯ್ದಿದ್ದಾರೆ.

*ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ನೀವು ಎಷ್ಟೇ ಕೂಗಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಮಾಡಿರುವ ಟ್ವೀಟ್‌ ಬಗ್ಗೆ ಸ್ಪಷ್ಟೀಕರಣವನ್ನೂ ನೀಡುವುದಿಲ್ಲ

–ರಮ್ಯಾ,ಮುಖ್ಯಸ್ಥೆ, ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.