ADVERTISEMENT

ಪಿಎಂಸಿ ಬ್ಯಾಂಕ್‌ನಿಂದ ಹಣ ವಿತ್‌ಡ್ರಾ ಮಿತಿ ₹40,000 ದಿಂದ ₹50,000ಕ್ಕೆ ಏರಿಕೆ

ಪಿಟಿಐ
Published 5 ನವೆಂಬರ್ 2019, 17:51 IST
Last Updated 5 ನವೆಂಬರ್ 2019, 17:51 IST
ಪಿಎಂಸಿ ಬ್ಯಾಂಕ್ ವಿರುದ್ಧ ಪ್ರತಿಭಟನಾ ನಿರತ ಮಹಿಳೆ
ಪಿಎಂಸಿ ಬ್ಯಾಂಕ್ ವಿರುದ್ಧ ಪ್ರತಿಭಟನಾ ನಿರತ ಮಹಿಳೆ   

ನವದೆಹಲಿ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿರುವ ಗ್ರಾಹಕರು ಪ್ರತಿದಿನ ₹ 50,000 ಹಣವನ್ನು ವಿತ್‌ಡ್ರಾ ಮಾಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಈ ಹಿಂದೆ ವಿತ್‌ಡ್ರಾ ಮಿತಿ ₹40,000 ಇತ್ತು.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಈ ನಿರ್ಧಾರದಿಂದಾಗಿ ಬ್ಯಾಂಕ್‌ನಲ್ಲಿ ಇರುವ ಒಟ್ಟಾರೆ
ಠೇವಣಿದಾರರಲ್ಲಿ ಶೇ 78ರಷ್ಟು ಗ್ರಾಹಕರು ತಮ್ಮ ಖಾತೆಯಲ್ಲಿರುವ ಪೂರ್ತಿ ಹಣವನ್ನು ಪಡೆಯಲು ಅವಕಾಶ ದೊರೆತಂತಾಗಿದೆ.

ADVERTISEMENT

ಏಕಕಾಲಕ್ಕೇ ₹ 50 ಸಾವಿರ ಪಡೆಯಲು ಸಾಧ್ಯವಿಲ್ಲ. ಹಂತ ಹಂತವಾಗಿ ಪಡೆಯಬೇಕಾಗುತ್ತದೆ. ಬ್ಯಾಂಕ್‌ನ ಎಟಿಎಂನಿಂದಲೇ ಈ ಮೊತ್ತವನ್ನು ಪಡೆಯಲೂ ಅವಕಾಶ ನೀಡಲಾಗಿದೆ.

ಸೆಪ್ಟೆಂಬರ್‌ನಲ್ಲಿ ಆರ್‌ಬಿಐ, ಬ್ಯಾಂಕ್‌ಗೆ ಆರು ತಿಂಗಳ ಕಾಲ ನಿರ್ಬಂಧ ವಿಧಿಸಿತ್ತು. ಅಲ್ಲದೆ ಠೇವಣಿದಾರರಿಗೆ ಒಟ್ಟಾರೆ ಮೊತ್ತದಲ್ಲಿ ₹ 1 ಸಾವಿರ ಮಾತ್ರ ಹಿಂದಕ್ಕೆ ಪಡೆಯಲು ಅನುಮತಿ ನೀಡಿತ್ತು. ಇದಕ್ಕೆ ಠೇವಣಿದಾರರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಮಿತಿಯನ್ನು ₹ 40 ಸಾವಿರಕ್ಕೆ ಹೆಚ್ಚಿಸಲಾಗಿತ್ತು.

ಬ್ಯಾಂಕ್‌ನ ಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಠೇವಣಿದಾರರ ಹಿತರಕ್ಷಣೆಯ ಉದ್ದೇಶದಿಂದ ಇನ್ನೂ ಹೆಚ್ಚಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಆರ್‌ಬಿಐ ತಿಳಿಸಿದೆ.

ಬ್ಯಾಂಕಿಂಗ್‌ ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸುವಲ್ಲಿ ವಿಫಲವಾಗಿರುವ ಕಾರಣಕ್ಕಾಗಿ ಪಿಎಂಸಿ ಬ್ಯಾಂಕ್‌ ಮೇಲೆ ಆರ್‌ಬಿಐ ಕೆಲವು ನಿರ್ಬಂಧಗಳನ್ನು ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.