ADVERTISEMENT

ಕ್ಯೂಎಸ್ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿ ಪ್ರಕಟ: ಐಐಟಿ ದೆಹಲಿಗೆ 123ನೇ ಸ್ಥಾನ

ಪಿಟಿಐ
Published 19 ಜೂನ್ 2025, 23:30 IST
Last Updated 19 ಜೂನ್ 2025, 23:30 IST
ಐಐಟಿ ದೆಹಲಿ
ಐಐಟಿ ದೆಹಲಿ   

ನವದೆಹಲಿ: ಲಂಡನ್‌ ಮೂಲದ ಕ್ವಾಕೆರಲಿ ಸೈಮಂಡ್ಸ್‌ (ಕ್ಯೂಎಸ್‌) ಬಿಡುಗಡೆಗೊಳಿಸಿದ 2026ರ ಶ್ರೇಯಾಂಕದಲ್ಲಿ  ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ (ಐಐಟಿ)ಯು ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಐಐಟಿ ದೆಹಲಿಯು 70 ಸ್ಥಾನಗಳಷ್ಟು ಮೇಲಕ್ಕೇರಿದೆ.

ಕ್ಯೂಎಸ್‌ ವಿಶ್ವದ ಅತ್ಯಂತ ಪ್ರತಿಷ್ಠಿತ ವಿಶ್ಯವಿದ್ಯಾಲಯಗಳ 2026ನೇ ಸಾಲಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಭಾರತದ 8 ಸಂಸ್ಥೆಗಳು ಹೊಸದಾಗಿ ಸೇರ್ಪಡೆಯಾಗಿವೆ. ದೇಶದ ಒಟ್ಟು 54 ಸಂಸ್ಥೆಗಳು ಸೇರ್ಪಡೆಗೊಂಡಿವೆ. ಈ ಮೂಲಕ ಪಟ್ಟಿಯಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ನಾಲ್ಕನೇ ದೇಶ ಎಂಬ ಗೌರವ ಭಾರತದ್ದಾಗಿದೆ. ಪಟ್ಟಿಯಲ್ಲಿ ಅಮೆರಿಕ (192 ಸಂಸ್ಥೆಗಳು) ಮೊದಲ ಸ್ಥಾನದಲ್ಲಿದ್ದು, ಬ್ರಿಟನ್‌ (90) ಹಾಗೂ ಚೀನಾ (72) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. 

ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು

  1. ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಅಮೆರಿಕ

    ADVERTISEMENT
  2. ಇಂಪೀರಿಯಲ್‌ ಕಾಲೇಜ್ ಆಫ್‌ ಲಂಡನ್‌, ಬ್ರಿಟನ್‌

  3. ಸ್ಟ್ಯಾನ್‌ಫೋರ್ಡ್‌ ಯೂನಿವರ್ಸಿಟಿ, ಅಮೆರಿಕ

  4. ಯೂನಿವರ್ಸಿಟಿ ಆಫ್‌ ಆಕ್ಸ್‌ಫರ್ಡ್‌, ಬ್ರಿಟನ್‌

  5. ಹಾರ್ವರ್ಡ್‌ ಯೂನಿವರ್ಸಿಟಿ, ಅಮೆರಿಕ

ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು

123; ಐಐಟಿ ದೆಹಲಿ

129; ಐಐಟಿ ಬಾಂಬೆ

180: ಐಐಟಿ ಮದ್ರಾಸ್‌

215: ಐಐಟಿ ಖರಗ್‌ಪುರ

219: ಐಐಎಸ್ಸಿ, ಬೆಂಗಳೂರು

ಶ್ರೇಯಾಂಕ ನೀಡಲು ಮಾನದಂಡವೇನು?
ಲಂಡನ್‌ ಮೂಲದ ಉನ್ನತ ಶಿಕ್ಷಣ ಸಂಸ್ಥೆಗಳ ವಿಶ್ಲೇಷಣಾ ಸಂಸ್ಥೆ ಕ್ವಾಕೆರಲಿ ಸೈಮಂಡ್ಸ್‌ (ಕ್ಯೂಎಸ್‌) ಪ್ರತಿವರ್ಷವೂ ಶಿಕ್ಷಣ ಸಂಸ್ಥೆಯ ಹಿನ್ನೆಲೆ, ಬೋಧಕ– ವಿದ್ಯಾರ್ಥಿಗಳ ಅನು‍‍ಪಾತ, ಸಂಶೋಧನೆಯಿಂದಾದ ಪರಿಣಾಮ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೈವಿಧ್ಯ ಹಾಗೂ ಪದವೀಧರರಿಗೆ ಉದ್ಯೋಗವಕಾಶ ಆಧರಿಸಿ ಶ್ರೇಯಾಂಕ ನೀಡುತ್ತದೆ.
ಕ್ಯೂಎಸ್‌ ಶ್ರೇಯಾಂಕ ಪಟ್ಟಿಯು ಭಾರತದ ಶಿಕ್ಷಣ ಕ್ಷೇತ್ರದ ಪಾಲಿಗೆ ಶುಭ ಸುದ್ದಿಯಾಗಿದೆ. ದೇಶದ ಯುವಕರ ಏಳ್ಗೆಗಾಗಿ ಸಂಶೋಧನೆ ಹಾಗೂ ನಾವೀನ್ಯತೆ ವ್ಯವಸ್ಥೆ ರೂಪಿಸುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ
ನರೇಂದ್ರ ಮೋದಿ, ಪ್ರಧಾನಿ
ನರೇಂದ್ರ ಮೋದಿ ಪ್ರಧಾನಿ
ಶ್ರೇಯಾಂಕದಲ್ಲಿ ಭಾರತದ ಸಾಧನೆಯು ಶಿಕ್ಷಣ ಕ್ಷೇತ್ರದಲ್ಲಿ ದೇಶದ ಸಾಧನೆಯ ಉತ್ತುಂಗಕ್ಕೇರಿದೆ
ಧರ್ಮೇಂದ್ರ ಪ್ರಧಾನ್‌, ಕೇಂದ್ರ ಶಿಕ್ಷಣ ಸಚಿವ
ಧರ್ಮೇಂದ್ರ ಪ್ರಧಾನ್‌ ಶಿಕ್ಷಣ ಸಚಿವ
ಭಾರತವು ಜಾಗತಿಕ ಉನ್ನತ ಶಿಕ್ಷಣ ನಕಾಶೆಯನ್ನು ಮತ್ತೆ ಬರೆಯುತ್ತಿದೆ. ಈ ವರ್ಷದ ಆವೃತ್ತಿಯಲ್ಲಿ ಬೇರೆ ಯಾವ ದೇಶಗಳೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ
ಜೆಸ್ಸಿಕಾ ಟರ್ನರ್‌, ಸಿಇಒ ಕ್ಯೂಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.