ADVERTISEMENT

Red Fort blast: ತನಿಖೆ ಪೂರ್ಣಗೊಳಿಸಲು ಎನ್‌ಐಎಗೆ ಮತ್ತೆ 45 ದಿನ ಅವಕಾಶ

ಪಿಟಿಐ
Published 14 ಫೆಬ್ರುವರಿ 2026, 3:06 IST
Last Updated 14 ಫೆಬ್ರುವರಿ 2026, 3:06 IST
<div class="paragraphs"><p>ನವದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟದ ಸ್ಥಳದ</p></div>

ನವದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟದ ಸ್ಥಳದ

   

ಪಿಟಿಐ ಚಿತ್ರ

Red Fort blast: Delhi Court grants NIA 45 more days to conclude investigationನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಕೆಂಪು ಕೋಟೆ ಬಳಿ ಕಳೆದ ವರ್ಷ ನಡೆದ ಸ್ಫೋಟ ಪ್ರಕರಣದ ತನಿಖೆ ಪೂರ್ಣಗೊಳಿಸಲು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ದೆಹಲಿ ನ್ಯಾಯಾಲಯವು ಶುಕ್ರವಾರ ಹೆಚ್ಚುವರಿಯಾಗಿ 45 ದಿನಗಳ ಕಾಲಾವಕಾಶ ನೀಡಿದೆ. 

ADVERTISEMENT

ಆರೋಪಿಗಳಿಗೆ ಹಣಕಾಸು ನೆರವು ಹಾಗೂ ಅವರು ಹೊಂದಿರುವ ಡಿಜಿಟಲ್‌ ಸಂಪರ್ಕದ ಕುರಿತು ವಿಸ್ತೃತ ತನಿಖೆ ಕೈಗೊಳ್ಳಲು ಕಾಲಾವಕಾಶವನ್ನು 90 ದಿನಗಳವರೆಗೆ ವಿಸ್ತರಿಸಬೇಕು ಎಂದು ಪಟಿಯಾಲ ನ್ಯಾಯಾಲಯಕ್ಕೆ ಎನ್‌ಐಎ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶ ಪಿತಾಂಬರ್‌ ದತ್‌ ಅವರು ಹೆಚ್ಚುವರಿ ಸಮಯ ನೀಡಿದ್ದಾರೆ.

ಪ್ರಕರಣದ ಏಳು ಆರೋಪಿಗಳಾದ ಅಮಿರ್‌ ರಶೀದ್‌ ಮಿರ್‌, ಜಸೀರ್‌ ಬಿಲಾಲ್‌ ವಾನಿ, ಮುಫ್ತಿ ಇರ್ಫಾನ್‌ ಅಹ್ಮದ್‌ ವಾಘೇ, ಡಾ. ಮುಝಾಮಿಲ್‌ ಶಕೀಲ್‌ ಘನೀ, ಡಾ. ಆದೀಲ್‌ ಅಹ್ಮದ್‌ ರಾಥಾರ್, ಡಾ. ಶಾಹೀನ್‌ ಸಯೀದ್‌ ಮತ್ತು ಸೋಯ‌ಬ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನೂ ಮಾರ್ಚ್‌ 13ರ ವರೆಗೆ ವಿಸ್ತರಿಸಲಾಗಿದೆ.

ವಿಚಾರಣೆ ಸಂದರ್ಭದಲ್ಲಿ ಸೋಯ‌ಬ್‌ ಎಂಬಾತನನ್ನು ಮಾತ್ರವೇ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಉಳಿದವರು, ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಿದ್ದರು.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್‌ಎಸ್‌) ನಿಯಮಗಳಿಗೆ ಅನುಸಾರವಾಗಿ, ಪ್ರಕರಣದ ತನಿಖೆಯ ಸಮಯವನ್ನು 90 ದಿನಗಳ ಶಾಸನಬದ್ಧ ಅವಧಿಯ ಜೊತೆಗೆ ಮತ್ತೆ 90 ದಿನಗಳ ವರೆಗೆ (ಒಟ್ಟು 180 ದಿನಕ್ಕೆ) ವಿಸ್ತರಿಸಬೇಕು ಎಂದು ತನಿಖಾ ಸಂಸ್ಥೆ ಮನವಿ ಮಾಡಿತ್ತು.

ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ ಎಂಬಾತ 2025ರ ನವೆಂಬರ್‌ 10ರಂದು ಚಲಾಯಿಸುತ್ತಿದ್ದ ಹುಂಡೈ ಐ20 ಕಾರು, ಕೆಂಪು ಕೋಟೆ ಬಳಿ ಸ್ಫೋಟಗೊಂಡು 15 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.