ADVERTISEMENT

ಹನುಮಾನ್ ಪ್ರತಿಮೆ ಮುಂದೆ ತುಂಡುಡುಗೆಯಲ್ಲಿ ಮಹಿಳೆಯರ ಬಾಡಿ ಬಿಲ್ಡಿಂಗ್ ಶೋ! ವಿವಾದ

ಐಎಎನ್ಎಸ್
Published 7 ಮಾರ್ಚ್ 2023, 16:12 IST
Last Updated 7 ಮಾರ್ಚ್ 2023, 16:12 IST
   

ಭೋಪಾಲ್: ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಮಹಿಳೆಯರ ಬಾಡಿಬಿಲ್ಡಿಂಗ್ ಸ್ಪರ್ಧೆ ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಫೆ 2ರಂದು ರತ್ಲಾಂನಲ್ಲಿ ‘ಇಂಡಿಯನ್ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್’ ಆಶ್ರಯದಲ್ಲಿ 13 ನೇ ಜೂನಿಯರ್ ಬಾಡಿ ಬಿಲ್ಡಿಂಗ್ ಸ್ಪರ್ಧೆ (ಮುಖ್ಯಮಂತ್ರಿ ಬಾಡಿಬಿಲ್ಡಿಂಗ್ ಸ್ಪರ್ಧೆ) ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಉದ್ಘಾಟಿಸಿದ್ದರು. ಸ್ಥಳಿಯ ಶಾಸಕರು, ಬಿಜೆಪಿ ಮುಖಂಡರು ಹಾಜರಿದ್ದರು.

ಆದರೆ, ಈ ಕಾರ್ಯಕ್ರಮ ಇದೀಗ ವಿವಾದವಾಗಿ ಮಾರ್ಪಟ್ಟು, ಪರಸ್ಪರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ADVERTISEMENT

ಆಗಿದ್ದೇನು?

ಕಾರ್ಯಕ್ರಮದಲ್ಲಿ ಮಹಿಳಾ ಬಾಡಿ ಬಿಲ್ಡರ್‌ಗಳಿಗೂ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಲಾರ್ಡ್ ಹನುಮಾನ್ ಪ್ರತಿಮೆಯನ್ನು ನಿಲ್ಲಿಸಿದ್ದರು. ಈ ವೇಳೆ ಮಹಿಳಾ ಸ್ಪರ್ಧಾಳುಗಳು ತುಂಡುಡುಗೆಯಲ್ಲಿ ಹನುಮಾನ್ ಪ್ರತಿಮೆ ಮುಂದೆ ತಮ್ಮ ದೇಹ ಧಾರ್ಢತ್ಯೆಯನ್ನು ಪ್ರದರ್ಶಿಸಿದ್ದರು.

ಕಾರ್ಯಕ್ರಮ ನಡೆದ ಬಳಿಕ ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ವಿರೋಧ ವ್ಯಕ್ತಪಡಿಸಿರುವುದಿರಂದ ಈ ಘಟನೆ ವಿವಾದವಾಗಿ ಮಾರ್ಪಟ್ಟಿದೆ.

ಹಿಂದೂಗಳ ಹಿತ ಕಾಯುತ್ತೇವೆ ಎಂದು ಆಡಳಿತ ನಡೆಸುತ್ತಿರುವ ಬಿಜೆಪಿ ಹಿಂದೂ ದೇವರಿಗೆ ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಂಡಿದೆ. ಇದೇನಾ ಇವರ ಹಿಂದೂ ಸಂಸ್ಕೃತಿ? ಎಂದು ಅಲ್ಲಿನ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸ್ಪರ್ಧೆ ನಡೆದಿದ್ದ ವೇದಿಕೆಯ ಮೇಲೆ ಹನುಮಾನ್ ಚಾಲೀಸಾ ಹೇಳಿದ್ದಾರೆ. ಬಳಿಕ ಗೋಮೂತ್ರ ಹಾಕಿ ವೇಧಿಕೆಯನ್ನು ಸ್ವಚ್ಛ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರು, ಆಯೋಜಕರು ಹಿಂದೂಗಳ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದಿದ್ದಾರೆ. ವಿಶೇಷವೆಂದರೆ ಹಲವು ಬಿಜೆಪಿ ಕಾರ್ಯಕರ್ತರು ಕೂಡ ಬಿಜೆಪಿ ಸರ್ಕಾರ ಆಂಜನೇಯನನ್ನು ಅವಮಾನಿಸಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಪ್ರತಿಭಟನೆ ನಡೆಸಿದೆ.

ಆದರೆ, ಕಾಂಗ್ರೆಸ್ ಈ ಘಟನೆಯನ್ನು ರಾಜಕೀಯ ಮಾಡುತ್ತಿದೆ. ಹನುಮಾನ್ ಪ್ರತಿಮೆಯನ್ನು ಕಾರ್ಯಕ್ರಮದ ಆರಂಭದಲ್ಲೇ ಪೂಜೆ ಮಾಡಲು ಇಟ್ಟಿತ್ತು ಎಂದು ಬಿಜೆಪಿ ನಾಯಕ ಹಾಗೂ ಭೂಪಾಲ್ ಮೇಯರ್ ಪ್ರಲ್ಹಾದ್ ಪಟೇಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.