
ಮಥುರಾ (ಉತ್ತರ ಪ್ರದೇಶ) (ಪಿಟಿಐ): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಅಂಗವಾಗಿ ಜನವರಿ 15ರಿಂದ ದೇಶಾದ್ಯಂತ ‘ಹಿಂದೂ ಸಮಾಜೋತ್ಸವ’ಗಳನ್ನು ಆಯೋಜಿಸಲಾಗುವುದು ಎಂದು ಬ್ರಜ್ ಪ್ರಾಂತ್ಯದ ಪ್ರಚಾರ ಪ್ರಮುಖ್ ಕೀರ್ತಿ ಕುಮಾರ್ ಭಾನುವಾರ ತಿಳಿಸಿದ್ದಾರೆ.
‘ದೇಶದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಸಮ್ಮೇಳನಗಳನ್ನು ನಡೆಸುವ ಗುರಿಯನ್ನು ಆರ್‌ಎಸ್‌ಎಸ್ ಹೊಂದಿದ್ದು, ಅದರಲ್ಲಿ ಸುಮಾರು 2000 ಸಮ್ಮೇಳನಗಳನ್ನು ಬ್ರಜ್ ಪ್ರದೇಶದಲ್ಲಿ ಆಯೋಜಿಸಲಾಗುವುದು. ಈ ಪ್ರದೇಶವು ಸುಮಾರು 3000 ನಗರ ಮತ್ತು ಗ್ರಾಮಗಳನ್ನು ಒಳಗೊಂಡಿದೆ’ ಎಂದು ಅವರು ಹೇಳಿದ್ದಾರೆ.
ಶತಮಾನೋತ್ಸವವನ್ನು ‘ಸಮಾಜೋತ್ಸವ’ವಾಗಿ ಆಚರಿಸಲು ಮತ್ತು ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸಲು ಆರ್‌ಎಸ್‌ಎಸ್‌ನ ಉನ್ನತ ನಾಯಕತ್ವವು ಕಳೆದ ವರ್ಷ ಕರೆ ನೀಡಿತ್ತು. ಅದರ ನಂತರ ವಿಜಯದಶಮಿಯಂದು ಸಮ್ಮೇಳನಗಳ ಸರಣಿಯನ್ನು ಪ್ರಾರಂಭಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.