ADVERTISEMENT

ಓಲಾ, ಉಬರ್‌ ಮಾದರಿಯಲ್ಲೇ ‘ಸಹಕಾರ್‌ ಟ್ಯಾಕ್ಸಿ’ ಜಾರಿಗೆ ಸಿದ್ಧತೆ: ಶಾ ಘೋಷಣೆ

ಕೇಂದ್ರ ಸಹಕಾರಿ ಸಚಿವ ಅಮಿತ್‌ ಶಾ ಘೋಷಣೆ

ಪಿಟಿಐ
Published 28 ಮಾರ್ಚ್ 2025, 15:29 IST
Last Updated 28 ಮಾರ್ಚ್ 2025, 15:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಓಲಾ, ಉಬರ್‌ ಮಾದರಿಯಲ್ಲೇ, ದೇಶದಾದ್ಯಂತ ಸಹಕಾರ ವ್ಯವಸ್ಥೆಯಡಿಯಲ್ಲಿ ‘ಸಹಕಾರ್‌ ಟ್ಯಾಕ್ಸಿ’ ಸೇವೆ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಹಕಾರಿ ಖಾತೆ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಈ ವಿಷಯ ತಿಳಿಸಿರುವ ಅವರು, ‘ಹೊಸ ಸೇವೆಯಡಿಯಲ್ಲಿ ದ್ವಿಚಕ್ರ ವಾಹನ, ತ್ರಿ ಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳನ್ನು ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, ಪ್ರಯಾಣಿಕರು ಪಾವತಿಸುವ ಹಣವು ನೇರವಾಗಿ ಚಾಲಕರಿಗೆ ಖಾತೆಗೆ ಸೇರಲಿದೆ’ ಎಂದು ತಿಳಿಸಿದರು.

ಈಗ ಸೇವೆ ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳು ಲಾಭ ಪಡೆಯುತ್ತಿದ್ದು, ‘ಸಹಕಾರ್‌ ಟ್ಯಾಕ್ಸಿ’ ವ್ಯವಸ್ಥೆಯಲ್ಲಿ ಚಾಲಕರಿಗೆ ಲಾಭದ ಹಣವೂ ವರ್ಗಾವಣೆಯಾಗಲಿದೆ. 

ADVERTISEMENT

ವಿಶ್ವದ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಭವಿಷ್ಯದಲ್ಲಿ ಆ್ಯಪ್‌ ಆಧರಿತ ಟ್ಯಾಕ್ಸಿ ಸೇವೆಗಳ ಬಳಕೆ ಹೆಚ್ಚಲಿದ್ದು, ಖಾಸಗಿ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಪಾರಮ್ಯ ಹೊಂದಿವೆ. ಹೆಚ್ಚಿನ ದರ ವಿಧಿಸುವ ಮೂಲಕ ಚಾಲಕ– ಪ್ರಯಾಣಿಕರಿಗೂ ಹೆಚ್ಚಿನ ತೊಂದರೆ ಉಂಟಾಗುತ್ತಿದೆ. ಈ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ‘ಸಹಕಾರ್‌ ಟ್ಯಾಕ್ಸಿ’ ಸೇವೆ ಆರಂಭಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.