ADVERTISEMENT

ಸುಶಾಂತ್‌ ಸಿಂಗ್‌ ಪ್ರಕರಣ: ಶಿವಸೇನೆ ನಾಯಕ ಸಂಜಯ್‌ ರಾವುತ್‌ಗೆ ಲೀಗಲ್ ನೊಟೀಸ್‌

ಪಿಟಿಐ
Published 12 ಆಗಸ್ಟ್ 2020, 12:46 IST
Last Updated 12 ಆಗಸ್ಟ್ 2020, 12:46 IST
ಸಂಜಯ್ ರಾವುತ್‌
ಸಂಜಯ್ ರಾವುತ್‌   

ಪಾಟ್ನಾ:ಶಿವಸೇನೆ ನಾಯಕರಾದ ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಅವರಿಗೆಬಾಲಿವುಡ್‌ ನಟ ದಿ. ಸುಶಾಂತ್‌ ಸಿಂಗ್‌ ಅವರ ಸಂಬಂಧಿಯಾದ ಬಿಹಾರದ ಶಾಸಕ ನೀರಜ್‌ ಕುಮಾರ್‌ ಬಬ್ಲು ಲೀಗಲ್‌ ನೊಟೀಸ್‌ ನೀಡಿದ್ದಾರೆ.

‘ಸುಶಾಂತ್‌ ಸಿಂಗ್‌ ರಜಪೂತ್‌ ಅವರು ತನ್ನದೇ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ’ ಎಂದು ಸಂಜಯ್‌ ರಾವುತ್ ಅವರು‌ ‘ಸಾಮ್ನಾ’ ಪತ್ರಿಕೆಯ ತನ್ನ ಅಂಕಣದಲ್ಲಿ ಬರೆದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ನೀರಜ್‌ ಕುಮಾರ್‌ ಅವರು, ರಾವುತ್‌ ಕ್ಷಮೆಕೇಳಬೇಕು ಎಂದು ನೊಟೀಸ್‌ ಕಳುಹಿಸಿದ್ದಾರೆ.

‘ಸಂಜಯ್‌ ರಾವುತ್ ಅವರು‌ ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅವರು 48 ಗಂಟೆಗಳೊಳಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಕಾನೂನಿನ ಮೊರೆ ಹೋಗುತ್ತೇವೆ’ ಎಂದು ನೀರಜ್‌ ಕುಮಾರ್‌ ಪರ ವಕೀಲ ಅನೀಶ್‌ ಜಾ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.