ನಕ್ಸಲ್
ಚಾಯ್‌ಬಾಸ: ಜಾರ್ಖಂಡ್ ಪಶ್ಚಿಮ ಸಿಂಘ್‌ಬುಮ್ ಜಿಲ್ಲೆಯ ಕಾಡಿನಿಂದ ಮೂರು ಕಚ್ಚಾ ಬಾಂಬ್‌ಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಈ ಕಚ್ಚಾ ಬಾಂಬ್‌ಗಳನ್ನು ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರು ಹುದುಗಿಸಿಟ್ಟಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಸಿಆರ್‌ಪಿಎಫ್, ಕೋಬ್ರಾ, ಜಾರ್ಖಂಡ್ ಜಾಗ್ವರ್ ಹಾಗೂ ಜಿಲ್ಲಾ ಪೊಲೀಸರು ನಡೆಸುತ್ತಿದ್ದ ಜಂಟಿ ಕೂಂಬಿಂಗ್ ವೇಳೆ, ಟೊಂಟೊ ಪೊಲೀಸ್ ಠಾಣೆ ವ್ಯಾಪ್ತಿಯ ಲೊವಬೆರಾ ಪ್ರದೇಶದದ ಕಾಡಿನಿಂದ ಈ ಸ್ಫೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ಸಿಂಘ್‌ಬುಮ್ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಹೇಳಿದ್ದಾರೆ.
ಸುಮಾರು ತಲಾ ಐದು ಕೆ.ಜಿ. ತೂಗುತ್ತಿದ್ದ ಕಚ್ಚಾ ಬಾಂಬ್‌ಗಳನ್ನು ಸ್ಥಳದಲ್ಲೇ ನಿಷ್ಕ್ರೀಯಗೊಳಿಸಿ, ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಿಸ್ರಿ ಬೆಸ್ರಾ ಸೇರಿ ಬೇಕಾಗಿರುವ ಹಲವು ಮಾವೋವಾದಿಗಳು ಈ ಕಾಡಿನಲ್ಲಿ ಅಡಗಿರುವ ಮಾಹಿತಿ ಇದ್ದು, ಹೀಗಾಗಿ ಕಳೆದ ಹಲವು ತಿಂಗಳಿನಿಂದ ಭಾರಿ ಕೂಂಬಿಂಗ್ ನಡೆಸಲಾಗುತ್ತಿದೆ.
ಬೆಸ್ರಾ ಅವರ ತಲೆಗೆ ಸರ್ಕಾರ ₹ 1 ಕೋಟಿ ಇನಾಮು ಕೂಡ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.