ADVERTISEMENT

ಸಂಸತ್ ಅಧಿವೇಶನ: ಅಶಿಸ್ತಿನ ನಡವಳಿಕೆ ಆರೋಪ, ಕಾಂಗ್ರೆಸ್‌ನ 7 ಸಂಸದರು ಅಮಾನತು

ಏಜೆನ್ಸೀಸ್
Published 5 ಮಾರ್ಚ್ 2020, 10:17 IST
Last Updated 5 ಮಾರ್ಚ್ 2020, 10:17 IST
ಸಂಸದರ ಅಮಾನತು ಖಂಡಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು: ಚಿತ್ರ ಕೃಪೆ – ಲೋಕಸಭಾ ಟಿವಿ
ಸಂಸದರ ಅಮಾನತು ಖಂಡಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು: ಚಿತ್ರ ಕೃಪೆ – ಲೋಕಸಭಾ ಟಿವಿ   

ನವದೆಹಲಿ: ಅಶಿಸ್ತಿನ ನಡವಳಿಕೆ ತೋರಿದ ಆರೋಪದಲ್ಲಿ 7 ಮಂದಿ ಕಾಂಗ್ರೆಸ್ ಸಂಸದರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಗುರುವಾರ ಅಮಾನತುಗೊಳಿಸಿದ್ದಾರೆ.

ಸಂಸತ್‌ನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಕಲಾಪದ ವೇಳೆ ಸಂಸದರು ಪೇಪರ್ ಹರಿದು ಸ್ಪೀಕರ್‌ ಅವರತ್ತ ಎಸೆದಿದ್ದಾರೆ ಎನ್ನಲಾಗಿದೆ.

ಗೌರವ್ ಗೊಗೊಯಿ, ಟಿ.ಎನ್.ಪ್ರತಾಪನ್, ಡಿಯನ್ ಕುರಿಕೋಸ್, ಆರ್. ಉಣ್ಣಿತ್ತಾನ್, ಮನಿಕಮ್ ಟಾಗೋರ್, ಬೆನ್ನಿ ಬೆಹ್ನನ್ ಮತ್ತು ಗುರ್‌ಜೀತ್ ಸಿಂಗ್ ಔಜ್‌ಲಾ ಅಮಾನತುಗೊಂಡಿರುವ ಸಂಸದರು.

ADVERTISEMENT

ಕಾಂಗ್ರೆಸ್ ಆಕ್ಷೇಪ: ಸಂಸದರನ್ನು ಅಮಾನತುಗೊಳಿಸಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ‘ಇದು ಸ್ಪೀಕರ್ ನಿರ್ಧಾರವಲ್ಲ. ಸರ್ಕಾರದ ನಿರ್ಧಾರ. ಇದಕ್ಕೆ ನಾವು ತಲೆಬಾಗುವುದಿಲ್ಲ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಹೇಳಿದ್ದಾರೆ.

ಸರ್ಕಾರದ ವಿರುದ್ಧದ ನಮ್ಮ ಹೋರಾಟ ಸಂಸತ್‌ನ ಒಳಗೆ ಮತ್ತು ಹೊರಗೆ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.