ADVERTISEMENT

ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾಗೆ ಮತ್ತೆ ಸಂಕಷ್ಟ: ವಂಚನೆ ಪ್ರಕರಣ ದಾಖಲು

ಪಿಟಿಐ
Published 14 ಆಗಸ್ಟ್ 2025, 8:05 IST
Last Updated 14 ಆಗಸ್ಟ್ 2025, 8:05 IST
ರಾಜ್ ಕುಂದ್ರಾ–ಶಿಲ್ಪಾ ಶೆಟ್ಟಿ
ರಾಜ್ ಕುಂದ್ರಾ–ಶಿಲ್ಪಾ ಶೆಟ್ಟಿ   

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ವಿರುದ್ಧ ವಂಚನೆ ಪ್ರಕರಣ ಗುರುವಾರ ದಾಖಲಾಗಿದೆ.

ಬೆಸ್ಟ್ ಡೀಲ್‌ ಟಿವಿ ಕಂಪನಿಗೆ ಸಂಬಂಧಿಸಿದಂತೆ ₹60.4 ಕೋಟಿ ಮೊತ್ತದ ಸಾಲ ಮತ್ತು ಹೂಡಿಕೆಯಲ್ಲಿ ಉದ್ಯಮಿ ದೀಪಕ್ ಕೊಠಾರಿ ಅವರಿಗೆ ವಂಚಿಸಲಾಗಿದೆ ಎಂಬ ಆರೋಪ ಸಂಬಂಧ ಜುಹು ಪೊಲೀಸ್ ಠಾಣೆಯ ಆರ್ಥಿಕ ವಂಚನೆ ವಿಭಾಗವು ಪ್ರಕರಣ ದಾಖಲಿಸಿಕೊಂಡಿದೆ.

‘ಆರೋಪವನ್ನು ಶಿಲ್ಪಾ ಶೆಟ್ಟಿ ಹಾಗೂ ರಾಜ್‌ ಕುಂದ್ರಾ ನಿರಾಕರಿಸಿದ್ದಾರೆ. ಬಹಳ ಹಿಂದೆ ನಡೆದ ವ್ಯವಹಾರವಿದು. ಕಂಪನಿಯು ಆರ್ಥಿಕ ಸಂಕಷ್ಟ ಎದುರಿಸಿತ್ತು ಮತ್ತು ದೀರ್ಘಕಾಲದ ಕಾನೂನು ಸಂಘರ್ಷ ಎದುರಿಸುತ್ತಿತ್ತು’ ಎಂದು ಶಿಲ್ಪಾ ಶೆಟ್ಟಿ ಪರ ವಕೀಲ ಪ್ರಶಾಂತ್ ಪಾಟೀಲ್ ತಿಳಿಸಿದ್ದಾರೆ.

ADVERTISEMENT

‘ಈ ಪ್ರಕರಣದಲ್ಲಿ ನನ್ನ ಕಕ್ಷೀದಾರರು ಯಾವುದೇ ಕ್ರಿಮಿನಲ್‌ ಕೃತ್ಯ ನಡೆಸಿಲ್ಲ. ಪೊಲೀಸರು ಕೇಳಿರುವ ಎಲ್ಲಾ ದಾಖಲೆಗಳನ್ನು ಕಾಲಕಾಲಕ್ಕೆ ಸಲ್ಲಿಸಿದ್ದಾರೆ. ಹಣದ ವ್ಯವಹಾರದ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಇದೊಂದು ಆಧಾರ ರಹಿತ ಆರೋಪವಾಗಿದ್ದು, ನನ್ನ ಕಕ್ಷಿದಾರರು ಸುಳ್ಳು ಆರೋಪ ಹೊರಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.