ADVERTISEMENT

ಶಿರೋಮಣಿ ಅಕಾಲಿ ದಳ ನಾಯಕ ಸುಖ್ಬಿರ್‌ ಸಿಂಗ್ ಬಾದಲ್‌ರಿಂದ ರಾಕೇಶ್‌ ಟಿಕಾಯತ್ ಭೇಟಿ

ಏಜೆನ್ಸೀಸ್
Published 31 ಜನವರಿ 2021, 14:36 IST
Last Updated 31 ಜನವರಿ 2021, 14:36 IST
ಸುಖ್ಬಿರ್‌ ಸಿಂಗ್‌ ಬಾದಲ್ ಮತ್ತು ರಾಕೇಶ್‌ ಟಿಕಾಯತ್
ಸುಖ್ಬಿರ್‌ ಸಿಂಗ್‌ ಬಾದಲ್ ಮತ್ತು ರಾಕೇಶ್‌ ಟಿಕಾಯತ್   

ನವದೆಹಲಿ: ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಾಜಿಪುರದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬಿರ್‌ ಸಿಂಗ್‌ ಬಾದಲ್ ಭಾನುವಾರ ಸಂಜೆ ಭೇಟಿ ನೀಡಿದ್ದಾರೆ.

ಇದೇ ವೇಳೆ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಅವರಿಗೆ ಅಭಿನಂದನೆ ಸಲ್ಲಿಸಿರುವ ಸುಖ್ಬಿರ್‌ ಸಿಂಗ್‌ ಬಾದಲ್, 'ಎಲ್ಲಾ ರೈತರು ಟಿಕಾಯತ್‌ ಅವರಿಗೆ ಕೃತಜ್ಞರಾಗಿರುತ್ತಾರೆ. ನಮ್ಮ ಪಕ್ಷವು ಅವರಿಗೆ ಬೆಂಬಲವಾಗಿ ನಿಲ್ಲುತ್ತದೆ' ಎಂದು ಹೇಳಿದ್ದಾರೆ.

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದ ಶಿರೋಮಣಿ ಅಖಾಲಿ ದಳವು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಕಳೆದ ವರ್ಷ ಹೊರಬಂದಿತ್ತು.

ADVERTISEMENT

ಸುಖ್ಬೀರ್ ಸಿಂಗ್ ಬಾದಲ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನೂತನ ಕೃಷಿ ಕಾಯ್ದೆಗಳ ಬಗ್ಗೆ ನಾಲ್ಕು ದಿನಗಳ ಜಾಗೃತಿ ಕಾರ್ಯಕ್ರಮ ನಡೆಸಿದ್ದರು. ಆ ವೇಳೆ ಅವರು ಕೃಷಿ ಮಸೂದೆಯಿಂದ ರೈತರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದ್ದರು.

'ಕೇಂದ್ರ ಸರ್ಕಾರದೊಂದಿಗೆ ಒತ್ತಡದಲ್ಲಿ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ' ಎಂದು ರಾಕೇಶ್‌ ಟಿಕಾಯತ್‌ ಭಾನುವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.