ADVERTISEMENT

ಲೋಕಸಭೆಯಲ್ಲಿ ತನ್ನ ಮುಖ್ಯಸಚೇತಕರನ್ನು ಬದಲಿಸಿದ ಶಿವಸೇನಾ

ಭಾವನಾ ಬದಲಿಗೆ ರಾಜನ್ ವಿಚಾರೆ ನಾಮನಿರ್ದೇಶನ

ಪಿಟಿಐ
Published 6 ಜುಲೈ 2022, 13:30 IST
Last Updated 6 ಜುಲೈ 2022, 13:30 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮುಂಬೈ: ‘ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾವು ಬುಧವಾರ ಲೋಕಸಭೆಯಲ್ಲಿ ಸಂಸದೆ ಭಾವನಾ ಗವಾಲಿ ಅವರ ಬದಲಿಗೆ ಸಂಸದ ರಾಜನ್ ವಿಚಾರೆ ಅವರನ್ನು ಮುಖ್ಯಸಚೇತಕರನ್ನಾಗಿ ನಾಮನಿರ್ದೇಶನ ಮಾಡಿದೆ’ ಎಂದು ಪಕ್ಷದ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.

‘ತಕ್ಷಣವೇ ಜಾರಿಗೆ ಬರುವಂತೆ ಶಿವಸೇನಾವು ರಾಜನ್ ಅವರನ್ನು ಮುಖ್ಯಸಚೇತಕರನ್ನಾಗಿ ನಾಮನಿರ್ದೇಶನ ಮಾಡುತ್ತಿದೆ’ ಎಂದು ರಾವುತ್ ಅವರು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಷಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಶಿವಸೇನಾದ ವಿರುದ್ಧ ಶಾಸಕ ಏಕನಾಥ ಶಿಂಧೆ ಅವರು ಬಂಡಾಯ ಎದ್ದಿದ್ದಾಗ ಸಂಸದೆ ಭಾವನಾ ಅವರು, ಬಿಜೆಪಿಯೊಂದಿಗೆ ಶಿವಸೇನಾವು ಮೈತ್ರಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದರು.ಭಾವನಾ ಅವರು ಮಹಾರಾಷ್ಟ್ರದ ಯಾವತ್‌ಮಲ್–ವಾಸೀಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ADVERTISEMENT

ಜುಲೈ 11ರ ಬಳಿಕ ಸಂಪುಟ ವಿಸ್ತರಣೆ ಸಾಧ್ಯತೆ:
ಶಿವಸೇನಾದ ಬಂಡಾಯ ಶಾಸಕರ ಅನರ್ಹತೆ ಮತ್ತು ಪಕ್ಷದ ವಿಪ್ ಕುರಿತು ಸ್ಪೀಕರ್ ನಿರ್ಧಾರದ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 11ರಂದು ನಡೆಸಲಿದೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟದ ವಿಸ್ತರಣೆಯು ಜುಲೈ 11ರ ಬಳಿಕ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.