ಮುಂಬೈ: ವೀರ ಸಾವರ್ಕರ್ ಬಗ್ಗೆ ತಮ್ಮ ಪಕ್ಷ ಹೊಂದಿರುವ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಈ ವಿಚಾರವಾಗಿ ಮುಂಬೈನಲ್ಲಿ ಸೋಮವಾರ ಮಾತನಾಡಿರುವ ಅವರು, 'ವೀರ ಸಾವರ್ಕರ್ ಬಗ್ಗೆ ಶಿವಸೇನಾ ಹೊಂದಿರುವ ನಿಲುವು ಎಂದಿಗೂ ಬದಲಾಗುವುದಿಲ್ಲ. ಈ ಹಿಂದೆ ಅವರನ್ನು ಅವಮಾನಿಸುವ ಸಲುವಾಗಿ ಬೇರೆಯವರು ಅನುಚಿತ ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ನಾವು ಸಾವರ್ಕರ್ ಪರವಾಗಿ ನಿಂತಿದ್ದೇವೆ. ಕಾರಣ, ನಾವು ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ' ಎಂದು ರಾವತ್ ತಿಳಿಸಿದ್ದಾರೆ.
'ಇಂದು ನಮ್ಮನ್ನು ಟೀಕಿಸುವವರು, ಸಾವರ್ಕರ್ ಅವರಿಗೆ ಭಾರತ ರತ್ನ ಪುರಸ್ಕಾರವನ್ನು ಏಕೆ ನೀಡಲಿಲ್ಲ ಎಂಬುದರ ಬಗ್ಗೆ ಉತ್ತರಿಸಲಿ' ಎಂದು ಸಂಜಯ್ ರಾವತ್ ಬಿಜೆಪಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.